
Bigg Boss ಕನ್ನಡ ಶೋಗೆ ಸಂಕಷ್ಟ – ಅನುಮತಿ ಕೊಡೋದಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ!
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ಗಾಗಿ ಕಾದಿದ್ದ ವೀಕ್ಷಕರಿಗೆ ನಿರಾಸೆಯಾಗಿದೆ. ಹೌದು.. ನಿಗದಿತ ವೇಳಾಪಟ್ಟಿಯಂತೆ ಸೆಪ್ಟೆಂಬರ್ 6ರಂದು ಪ್ರಾರಂಭವಾಗುವುದು ಅಉಮಾನ ಎಂಬ ಪ್ರಶ್ನೆ ಮೂಡಿದೆ. ಪರಿಸರ ನಿಯಮಗಳ ಉಲ್ಲಂಘನೆ ಮತ್ತು ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳದಿರುವುದೇ ಈ ಅನಿಶ್ಚಿತತೆಗೆ ಮುಖ್ಯ ಕಾರಣವಾಗಿದೆ.

ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ
ಈ ಕುರಿತು ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದು, ಈ ಬಾರಿ ಜಾಲಿವುಡ್ ಸಂಸ್ಥೆಯು ಶೋ ನಡೆಸಲು ಅಗತ್ಯ ಅನುಮತಿಗಳನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಕಳೆದ ವರ್ಷ ವಿಧಿಸಲಾಗಿದ್ದ ದಂಡದ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಈ ಎಲ್ಲ ಲೋಪಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳದಿದ್ದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ” ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

READ THIS : ಸುರ್ಜೆವಾಲಾ ಮನವೊಲಿಕೆ ಸಕ್ಸಸ್ – ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್
ಕಳೆದ ವರ್ಷವೂ ಎದುರಾಗಿತ್ತು ತೊಡಕು
ಕಳೆದ ವರ್ಷವೂ ಪರಿಸರ ನಿಯಮಗಳ ಉಲ್ಲಂಘನೆ ಹಾಗೂ ಅಗತ್ಯ ಅನುಮತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ Bigg Boass ಕಾರ್ಯಕ್ರಮದ ಚಿತ್ರೀಕರಣ ಮತ್ತು ಪ್ರಸಾರಕ್ಕೆ ತೊಡಕು ಎದುರಾಗಿತ್ತು.
ಇದೀಗ ಮತ್ತೆ ಇದೇ ರೀತಿಯ ಪರಿಸರ ಸಂಬಂಧಿತ ಸಮಸ್ಯೆ ಎದುರಾಗಿರುವುದರಿಂದ, ಕಾರ್ಯಕ್ರಮದ ನಿರ್ಮಾಪಕರು ಹಾಗೂ ‘ಕಲರ್ಸ್ ಕನ್ನಡ’ ವಾಹಿನಿಗೆ ಸಂಬಂಧಪಟ್ಟ ನಿಯಮಗಳನ್ನು ಶೀಘ್ರವಾಗಿ ಪೂರೈಸಿ ಅಗತ್ಯ ಅನುಮತಿಗಳನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

MUST WATCH : ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ..! – TUMAKURU VV SYNDICATE ಸದಸ್ಯ CID ವಶಕ್ಕೆ.!




