ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ Krunal Pandya ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13ರಿಂದ ಆರಂಭವಾಗಲಿದ್ದು, ಈ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ. ಈ ನಡುವೆ ತಂಡದ ಆಯ್ಕೆ ಕುರಿತು ಮಹತ್ವದ ವರದಿಯೊಂದು ಹೊರಬಿದ್ದಿದ್ದು, ಅನುಭವಿ ಸ್ಪಿನ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಮತ್ತೆ ಭಾರತ ತಂಡದಲ್ಲಿ ಅವಕಾಶ ನೀಡುವ ಬಗ್ಗೆ ಆಯ್ಕೆದಾರರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
2021ರಲ್ಲಿ ಟೀಂ ಇಂಡಿಯಾ ಪರ ಟಿ20 ಪಂದ್ಯ
ಕೃನಾಲ್ ಪಾಂಡ್ಯ ಕಳೆದ ಐದು ವರ್ಷಗಳಿಂದ ಭಾರತ ತಂಡದಿಂದ ಹೊರಗಿದ್ದಾರೆ. ಅವರು ಕೊನೆಯ ಬಾರಿಗೆ 2021ರಲ್ಲಿ ಟೀಂ ಇಂಡಿಯಾ ಪರ ಟಿ20 ಪಂದ್ಯ ಆಡಿದ್ದರು. ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ.
READ THIS : ಹಾರ್ದಿಕ್ ವಿಕೆಟ್ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ..!

ಅಕ್ಷರ್ ಪಟೇಲ್ ಬದಲಿಗೆ ಕೃನಾಲ್?
ವರದಿಗಳ ಪ್ರಕಾರ, Krunal Pandya ಅವರನ್ನು ತಂಡಕ್ಕೆ ಆಯ್ಕೆ ಮಾಡಿದರೆ, ಅಕ್ಷರ್ ಪಟೇಲ್ ಅವರ ಸ್ಥಾನಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತೀಚಿನ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಅಕ್ಷರ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಅವರು ಬೌಲಿಂಗ್ನಲ್ಲೂ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಆಯ್ಕೆದಾರರು ಕೃನಾಲ್ ಅವರ ಆಯ್ಕೆಯನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ 2026ರಲ್ಲಿ ಕೃನಾಲ್ ಅಬ್ಬರ
ಐಪಿಎಲ್ 2026ರಲ್ಲಿ ಕೃನಾಲ್ ಪಾಂಡ್ಯ ಆರ್ಸಿಬಿ ಪರ ನೀಡಿದ ಆಲ್ರೌಂಡ್ ಪ್ರದರ್ಶನ ಗಮನ ಸೆಳೆದಿತ್ತು.
ಅವರು 37.66ರ ಸರಾಸರಿಯಲ್ಲಿ 226 ರನ್ ಗಳಿಸುವುದರ ಜೊತೆಗೆ 14 ವಿಕೆಟ್ ಕಬಳಿಸಿದ್ದರು. ಅವರ ಬೌಲಿಂಗ್ ಎಕಾನಮಿ ಕೂಡ ಪ್ರತಿ ಓವರ್ಗೆ 8.41 ರನ್ ಆಗಿತ್ತು.
ಪವರ್ಪ್ಲೇಯಿಂದ ಡೆತ್ ಓವರ್ಗಳವರೆಗೆ ಬೌಲಿಂಗ್ ಮಾಡುವ ಸಾಮರ್ಥ್ಯ, ಬ್ಯಾಟಿಂಗ್ ಕೊಡುಗೆ ಹಾಗೂ ಉತ್ತಮ ಫೀಲ್ಡಿಂಗ್ ಕೃನಾಲ್ ಅವರ ಪ್ರಮುಖ ಬಲಗಳಾಗಿವೆ. ಹೀಗಾಗಿ ಟಿ20 ತಂಡದಲ್ಲಿ ಅವರ ಅನುಭವವನ್ನು ಬಳಸಿಕೊಳ್ಳಲು ಆಯ್ಕೆದಾರರು ಮುಂದಾಗಬಹುದು ಎನ್ನಲಾಗಿದೆ.

Krunal Pandya ಕಂಬ್ಯಾಕ್ ಆದರೆ ಆರ್ಸಿಬಿಗೆ ಆರ್ಥಿಕ ಹೊಡೆತ?
ಕೃನಾಲ್ ಪಾಂಡ್ಯ ಭಾರತ ತಂಡಕ್ಕೆ ಮರಳಿದರೆ ಅದು ಅವರ ವೃತ್ತಿಜೀವನಕ್ಕೆ ದೊಡ್ಡ ಉತ್ತೇಜನವಾಗಲಿದೆ. ಆದರೆ ಇದೇ ಬೆಳವಣಿಗೆ ಆರ್ಸಿಬಿಗೆ ಆರ್ಥಿಕವಾಗಿ ಹೊಡೆತ ನೀಡುವ ಸಾಧ್ಯತೆಯೂ ಇದೆ.
MUST WATCH : ಅಪಘಾ*ದ ಬಳಿಕ ಸಿಡಿದೆದ್ದ ಜನರು – HUMPS ಹಾಕುವಂತೆ ರಸ್ತೆ ತಡೆದು PROTEST





