
Sonal Dinusha Record :ಟೀಮ್ ಇಂಡಿಯಾ ವಿರುದ್ಧ ಅಬ್ಬರ… 48 ವರ್ಷಗಳ ಹಳೆಯ ದಾಖಲೆ ಧೂಳೀಪಟ
ಟೀಮ್ ಇಂಡಿಯಾದ ಬಲಿಷ್ಠ ಬೌಲಿಂಗ್ ಪಡೆಯನ್ನು ಎದುರಿಸುವುದು ಯಾವುದೇ ಯುವ ಬ್ಯಾಟರ್ಗೆ ಸವಾಲಿನ ಸಂಗತಿ. ಆದರೆ ಶ್ರೀಲಂಕಾದ 25 ವರ್ಷದ ಯುವ ಆಲ್ರೌಂಡರ್ ಸೋನಲ್ ದಿನುಷಾ, ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
50+ ಸ್ಕೋರ್ ದಾಖಲಿಸಿದ ಏಷ್ಯಾದ ಮೊದಲ ಬ್ಯಾಟರ್
ಭಾರತದ ವಿರುದ್ಧ ಆಡಿದ ಮೊದಲ ನಾಲ್ಕು ಟೆಸ್ಟ್ ಇನಿಂಗ್ಸ್ಗಳಲ್ಲೂ 50ಕ್ಕೂ ಹೆಚ್ಚು ರನ್ ಗಳಿಸಿರುವ Sonal Dinusha, ಟೀಮ್ ಇಂಡಿಯಾ ವಿರುದ್ಧ ಸತತ ನಾಲ್ಕು ಇನಿಂಗ್ಸ್ಗಳಲ್ಲಿ 50+ ಸ್ಕೋರ್ ದಾಖಲಿಸಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಲ್ಕು ಇನಿಂಗ್ಸ್ಗಳಲ್ಲಿ ಭರ್ಜರಿ ಬ್ಯಾಟಿಂಗ್
ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಿನುಷಾ 100 ಹಾಗೂ 84 ರನ್ಗಳ ಇನಿಂಗ್ಸ್ ಆಡಿದ್ದರು. ಬಳಿಕ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 103 ರನ್ಗಳ ಶತಕ ಸಿಡಿಸಿದರು.
ಇದೀಗ ಎರಡನೇ ಟೆಸ್ಟ್ನ ದ್ವಿತೀಯ ಇನಿಂಗ್ಸ್ನಲ್ಲೂ 50ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಸತತ ನಾಲ್ಕು ಇನಿಂಗ್ಸ್ಗಳಲ್ಲಿ ಅರ್ಧಶತಕದ ಗಡಿ ದಾಟಿದ್ದಾರೆ.
READ THIS : ರಿಷಭ್ ಪಂತ್ ಆರ್ಭಟಕ್ಕೆ ಶುಭ್ಮನ್ ಗಿಲ್ ದಾಖಲೆ ಉಡೀಸ್!

ಝಹೀರ್ ಅಬ್ಬಾಸ್ ದಾಖಲೆ ಹಿಂದಿಕ್ಕಿದ Sonal Dinusha
ಇದಕ್ಕೂ ಮೊದಲು ಭಾರತದ ವಿರುದ್ಧ ಸತತ ಮೂರು ಇನಿಂಗ್ಸ್ಗಳಲ್ಲಿ 50+ ರನ್ ಗಳಿಸಿದ ಏಷ್ಯಾದ ಬ್ಯಾಟರ್ ಎಂಬ ದಾಖಲೆ ಪಾಕಿಸ್ತಾನದ ದಿಗ್ಗಜ ಝಹೀರ್ ಅಬ್ಬಾಸ್ ಅವರ ಹೆಸರಿನಲ್ಲಿತ್ತು. 1978ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು.
ಆದರೆ ಇದೀಗ ಸೋನಲ್ ದಿನುಷಾ ಸತತ ನಾಲ್ಕು ಇನಿಂಗ್ಸ್ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಆ ದಾಖಲೆ ಮುರಿದಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಇಂತಹ ಸಾಧನೆ ಮಾಡಿದ ಏಷ್ಯಾದ ಮೊದಲ ಬ್ಯಾಟರ್ ಹಾಗೂ ಶ್ರೀಲಂಕಾದ ಏಕೈಕ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

MUST WATCH : ಪಾಗಲ್ ಪ್ರೇಮಿ ಕಿರುಕುಳ – ಆತ್ಮಹ*ಗೆ ಶರಣಾದ ಅಪ್ರಾಪ್ತೆ.!




