ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ – Kiccha ಡೈಲಾಗ್

ನಟ ʻಕಿಚ್ಚʼ ಸುದೀಪ್ ಅವರಿಗೆ ಸೆ.2ರಂದು ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಒಂದು ಕಳಕಳೀಯ ಮನವಿ ಮಾಡಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ವಿಶೇಷ ದಿನವನ್ನಾಗಿ ಪರಿವರ್ತಿಸಿರುವ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿರುವ ಸುದೀಪ್, ಅಭಿಮಾನಿಗಳ ಪ್ರೀತಿ, ಚಪ್ಪಾಳೆ, ಶಿಳ್ಳೆ ಹಾಗೂ ಪ್ರೋತ್ಸಾಹವೇ ತಮ್ಮ ಪಾಲಿನ ಶ್ರೀರಕ್ಷೆ ಎಂದು ಹೇಳಿದ್ದಾರೆ.

‘ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ’
“ಸೆಪ್ಟೆಂಬರ್ 2 ಎಂಬುದು ಒಂದು ದಿನಾಂಕ ಅಷ್ಟೇ. ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ನಿಮ್ಮ ಅಭಿಮಾನ, ಹುಚ್ಚು ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು” ಎಂದು ಸುದೀಪ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಹಾಗೂ ಬಲವಾದ ಕಾರಣಗಳಿಂದಾಗಿ ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸಂಭ್ರಮವನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ತಮಗೆ ಸಂಭ್ರಮವೇ ಅಲ್ಲ ಎಂದಿದ್ದಾರೆ.
READ THIS : ಸುದೀಪ್ ಸಿನಿ ಪಯಣಕ್ಕೆ 30 ವರ್ಷ – ಫ್ಯಾನ್ಸ್ಗೆ ಭಾವುಕ ಪತ್ರ ಬರೆದ Kiccha..!

ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ
“ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ನೆಡೆಸುವ ಕಾರ್ಯಕ್ರಮಗಳೇ ಆಶೀರ್ವಾದ. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿ ಆಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?
ಅಂದು ಮನೆಯ ಬಳಿಯೂ ಯಾರಿಗೂ ಲಭ್ಯವಾಗುತ್ತಿಲ್ಲ. ಸತ್ಕಾರಗಳು ಗದ್ದಲವಾಗಬಾರದು ಎ೦ಬುದನ್ನು ನಿಮ್ಮಲ್ಲಿ ಪದೇ ಪದೇ ಅರಿಕೆ ಮಾಡಿಕೊಂಡಿದ್ದೇನೆ.
ನಿಮ್ಮಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ. ನಿಮ್ಮ ಪ್ರೀತಿ, ಹಾರೈಕೆಗಳಿಗಿಂತ ಮತ್ತೊಂದು ಶ್ರೀರಕ್ಷೆ, ಆಶೀರ್ವಾದ ಇರಲು ಸಾಧ್ಯವೇ?”
ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ
“ಮತ್ತೊಂದು ವಿಷಯ .. 30 ವರ್ಷ… ಅಂದರೆ “ಬರೋಬ್ಬರಿ ಮೂವತ್ತು ವರ್ಷ” ಕನ್ನಡ ಚಿತ್ರರಂಗಕ್ಕೆ ಅರ್ಪಿಸಿಕೊಂಡವನಿಗೆ ಸಿನಿಮಾ ನನ್ನ ಪರಮ ಕಾಯಕ ಅನ್ನೋದು ಸ್ಪಷ್ಟ.
ಕೆಲವೊಮ್ಮೆ ತಡವಾಗಬಹುದು ಅದಕ್ಕೂ ಕಾರಣಗಳಿರುತ್ತವೆ. ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ ಎಂದು ಬರೆದುಕೊಂಡಿದ್ದಾರೆ.
MUST WATCH : ನಾಗವಲ್ಲಿಯಲ್ಲಿ ಹಿಂದೂ-ಮುಸ್ಲಿಂ ಒಗ್ಗಟ್ಟು – ಒಟ್ಟಾಗಿ ಸೇರಿ EID MILAD ಆಚರಣೆ




