
SANDALWOOD : ಎರಡು ವಾರಕ್ಕೆ ‘ಪ್ರೇಮದ ಊರಲಿ’ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ವಿವರ
ಸ್ಯಾಂಡಲ್ವುಡ್ನಲ್ಲಿ ಸಣ್ಣ ಬಜೆಟ್ನ ಸಿನಿಮಾವೊಂದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡ್ತಿದೆ. ಹೌದು.. ಸೆಪ್ಟೆಂಬರ್ 25ರಂದು ಬಿಡುಗಡೆಯಾದ ‘ಪ್ರೇಮದ ಊರಲಿ’ ಸಿನಿಮಾ, ಪ್ರೇಕ್ಷಕರ ಮೌಖಿಕ ಪ್ರಚಾರದಿಂದ ಹಂತ ಹಂತವಾಗಿ ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಇದೀಗ ಎರಡು ವಾರಗಳಲ್ಲಿ ಕರ್ನಾಟಕದಲ್ಲೇ ಬರೋಬ್ಬರಿ 33 ಕೋಟಿ 75 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಎರಡು ವಾರಕ್ಕೆ ಸಿನಿಮಾ ಗಳಿಸಿದ್ದೆಷ್ಟು?
ಇನ್ನು ಚಿತ್ರದ ಕಲೆಕ್ಷನ್ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಎರಡು ವಾರಗಳಿಗೆ 33.75 ಕೋಟಿ ರೂಪಾಯಿ ಗ್ರಾಸ್ ಹಾಗೂ 28.97 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ದಾಖಲಾಗಿದೆ ಎನ್ನಲಾಗಿದೆ.
ಒಟ್ಟು 6,829 ಪ್ರದರ್ಶನಗಳನ್ನು ಕಂಡಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಮೌಖಿಕ ಪ್ರಚಾರವೇ ದೊಡ್ಡ ಬಲವಾಗಿದೆ.
READ THIS : ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದ ‘ಪ್ರೇಮದ ಊರಲಿ’ ಸಿನಿಮಾ!

ಮೊದಲ ದಿನದ ಕಲೆಕ್ಷನ್ ಎಷ್ಟು?
ಚಿತ್ರ ಬಿಡುಗಡೆಯಾದ ಮೊದಲ ದಿನ ಕೇವಲ 60 ಪ್ರದರ್ಶನಗಳೊಂದಿಗೆ 13 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು ಎನ್ನಲಾಗಿದೆ. ಆರಂಭದಲ್ಲಿ ನಿಧಾನಗತಿಯ ಪ್ರದರ್ಶನ ಕಂಡ ಸಿನಿಮಾ, ವಾರಾಂತ್ಯದ ವೇಳೆಗೆ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು. ಮೊದಲ ಏಳು ದಿನಗಳಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 5 ಕೋಟಿ 32 ಲಕ್ಷ ರೂಪಾಯಿಗೆ ತಲುಪಿತ್ತು ಎಂದು ತಿಳಿದುಬಂದಿದೆ.
ಚಿತ್ರದ ಕಲೆಕ್ಷನ್ ಗಣನೀಯವಾಗಿ ಹೆಚ್ಚು
ಆದರೆ ಎರಡನೇ ವಾರದಲ್ಲಿ ಚಿತ್ರದ ಕಲೆಕ್ಷನ್ ಗಣನೀಯವಾಗಿ ಹೆಚ್ಚಾಗಿದೆ ಎನ್ನಲಾಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿ ರಜಾದಿನದಂದು 3 ಕೋಟಿ 2 ಲಕ್ಷ ರೂಪಾಯಿ, ಅಕ್ಟೋಬರ್ 4ರ ಭಾನುವಾರ 4 ಕೋಟಿ 50 ಲಕ್ಷ ರೂಪಾಯಿ ಹಾಗೂ ಅಕ್ಟೋಬರ್ 8ರಂದು 4 ಕೋಟಿ 56 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದೇ ವೇಳೆ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚಾಗಿದ್ದು, ಒಂದು ದಿನದ ಶೋಗಳ ಸಂಖ್ಯೆ 900ರ ಗಡಿ ದಾಟಿದೆ ಎನ್ನಲಾಗಿದೆ.

SANDALWOOD – ಎರಡು ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ
ಸುಮಾರು ಎರಡು ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ, ಎರಡು ವಾರಗಳಲ್ಲಿ 33 ಕೋಟಿ ರೂಪಾಯಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ.
ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ಹೆಚ್ಚಿನ ಗಳಿಕೆ ದಾಖಲಿಸಿರುವುದು ಚಿತ್ರದ ವಿಶೇಷತೆಯಾಗಿದೆ. ಒಟ್ಟಿನಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಬಾಕ್ಸ್ ಆಫೀಸ್ ಸಾಧನೆ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದೆ.
MUST WATCH : ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್.. ಹಿಂಡಲಗಾ ಜೈಲಿಗೆ ಶಿಫ್ಟ್





