
ಕೆನಡಾ ತಂಡದ ವಿಶ್ವ ದಾಖಲೆ ಮುರಿದ TEAM INDIA
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಹೊಸ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಕೆನಡಾ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ ಭಾರತ, 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಅತಿಹೆಚ್ಚು ಬಾರಿ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು
ಏಷ್ಯನ್ ಗೇಮ್ಸ್ನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 169 ರನ್ಗಳಿಸಿತು.
169 ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಭಾರತದ ಬೌಲರ್ಗಳ ದಾಳಿಗೆ ತತ್ತರಿಸಿತು. ಕೇವಲ 9.5 ಓವರ್ಗಳಲ್ಲಿ 45 ರನ್ಗಳಿಗೆ ಆಲೌಟ್ ಆಯಿತು.
ಪರಿಣಾಮ ಭಾರತ ತಂಡ 124 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
READ THIS : 5 ವರ್ಷಗಳ ಬಳಿಕ ಕೃನಾಲ್ ಪಾಂಡ್ಯಗೆ ಟೀಂ ಇಂಡಿಯಾದಲ್ಲಿ ಸ್ಥಾನ!

ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ!
ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಅತಿಹೆಚ್ಚು ಬಾರಿ ಗೆದ್ದ ತಂಡ ಎಂಬ ವಿಶ್ವ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಕೆನಡಾ ತಂಡದ ಹೆಸರಿನಲ್ಲಿತ್ತು.
90 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೆನಡಾ ತಂಡ 10 ಬಾರಿ 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಅತಿಹೆಚ್ಚು ಬಾರಿ ಗೆಲುವು ಸಾಧಿಸಿದ ತಂಡ – TEAM INDIA
ಭಾರತ ಇದೀಗ 292 ಟಿ20 ಪಂದ್ಯಗಳಲ್ಲಿ 11 ಬಾರಿ 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಗೆದ್ದು ಕೆನಡಾದ ದಾಖಲೆಯನ್ನು ಹಿಂದಿಕ್ಕಿದೆ. ಶ್ರೀಲಂಕಾ ವಿರುದ್ಧದ 124 ರನ್ಗಳ ಗೆಲುವು ಭಾರತದ ಪಾಲಿಗೆ ಮತ್ತೊಂದು ದಾಖಲೆಯ ಗೆಲುವಾಗಿ ದಾಖಲಾಗಿದೆ. ಹೀಗಾಗಿ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100ಕ್ಕೂ ಹೆಚ್ಚು ರನ್ಗಳ ಅಂತರದಿಂದ ಅತಿಹೆಚ್ಚು ಬಾರಿ ಗೆಲುವು ಸಾಧಿಸಿದ ತಂಡ ಎಂಬ ವಿಶ್ವ ದಾಖಲೆಯನ್ನು TEAM INDIA ತನ್ನದಾಗಿಸಿಕೊಂಡಿದೆ.

MUST WATCH : ಚೆನಾಬ್ ಬ್ರಿಡ್ಜ್ಗೆ ಸೋಮಣ್ಣ ವಿಸಿಟ್ – ಮೋದಿ ಟೀಕಿಸೋರಿಗೆ ಸಚಿವರ ಸವಾಲ್




