
ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಗ್ರಾಹಕರಿಗೆ LPG ಶಾಕ್ – ವಾಣಿಜ್ಯ ಸಿಲಿಂಡರ್ ಬೆಲೆ 9.50 ರೂ. ಏರಿಕೆ
ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬೆಲೆ ಏರಿಕೆಯ ಶಾಕ್ ನೀಡಿವೆ. 19 ಕೆಜಿ ತೂಕದ ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿದೆ.
ಏರಿಕೆಯಾಗಿದೆಷ್ಟು?
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಪ್ರಕಟಿಸಿರುವ ದರಗಳ ಪ್ರಕಾರ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 9.50 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿವೆ.

ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಿಲ್ಲ
ಆದರೆ ಗೃಹ ಬಳಕೆದಾರರಿಗೆ ಈ ಬಾರಿ ಯಾವುದೇ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲ. 14 ಕೆಜಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದೇ ರೀತಿ 5 ಕೆಜಿ ಹಾಗೂ 10 ಕೆಜಿ ಸಿಲಿಂಡರ್ಗಳ ದರದಲ್ಲೂ ಯಾವುದೇ ಪ್ರಮುಖ ಪರಿಷ್ಕರಣೆ ಇಲ್ಲ.
5 ಕೆಜಿ ಸಿಲಿಂಡರ್ಗಳ ದರದಲ್ಲಿ ಏನು ಬದಲಾವಣೆ?
- 5 ಕೆಜಿ ಸಾಮಾನ್ಯ ಎಲ್ಪಿಜಿ ಸಿಲಿಂಡರ್: ₹349.50 — ದರದಲ್ಲಿ ಬದಲಾವಣೆ ಇಲ್ಲ.
- 5 ಕೆಜಿ XTRALITE ಸಿಲಿಂಡರ್: ₹339 — ದರ ಸ್ಥಿರ.
- 5 ಕೆಜಿ ನಾನ್-ಡೊಮೆಸ್ಟಿಕ್ ಸಿಲಿಂಡರ್: ₹762ರಿಂದ ₹764ಕ್ಕೆ ಏರಿಕೆ
READ THIS : ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ 183.50 ರೂ. ಇಳಿಕೆ!

ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ
ಸೆಪ್ಟೆಂಬರ್ 1ರಿಂದ ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರ ಹೀಗಿದೆ:
- ದೆಹಲಿ: ₹2,747.50
- ನೋಯ್ಡಾ: ₹2,747.50
- ಮುಂಬೈ: ₹2,701
- ಕೋಲ್ಕತ್ತಾ: ₹2,982
- ಚೆನ್ನೈ: ₹2,916.50
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್ ಸೇರಿದಂತೆ ವಾಣಿಜ್ಯ ಅಡುಗೆ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಉದ್ಯಮಗಳ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.

ಗೃಹ ಬಳಕೆಯ LPG ಸಿಲಿಂಡರ್ ದರ ಎಷ್ಟು?
ಗೃಹ ಬಳಕೆದಾರರಿಗೆ ಸೆಪ್ಟೆಂಬರ್ 1ರಂದು ಯಾವುದೇ ಬೆಲೆ ಏರಿಕೆ ಮಾಡಲಾಗಿಲ್ಲ. ಪ್ರಮುಖ ನಗರಗಳ 14 ಕೆಜಿ ಗೃಹ ಬಳಕೆಯ ಸಿಲಿಂಡರ್ ದರ ಹೀಗಿದೆ:
- ದೆಹಲಿ: ₹942
- ಮುಂಬೈ: ₹941.50
- ಕೋಲ್ಕತ್ತಾ: ₹968
- ಚೆನ್ನೈ: ₹957.50
ಇನ್ನು ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್ಪಿಜಿ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಗೃಹ ಬಳಕೆದಾರರಿಗೆ ಸದ್ಯಕ್ಕೆ ದರ ಏರಿಕೆಯಿಂದ ರಿಲೀಫ್ ಸಿಕ್ಕಿದೆ.

MUST WATCH : ಸೈಟ್ಗಾಗಿ ಕಾಯ್ತಿದ್ದವರಿಗೆ ಗುಡ್ನ್ಯೂಸ್ – ಶಿರಾದಲ್ಲಿ 10 ಸಾವಿರ ಸೈಟ್ ಹಂಚಿಕೆ.!




