ಸರಣಿ ಬೆಲೆ ಏರಿಕೆಯ ನಂತರ, ಈ ವರ್ಷ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಇದು ಮೊದಲ ಕಡಿತವಾಗಿದೆ.

ಮೇ ಮತ್ತು ಜೂನ್ ತಿಂಗಳಲ್ಲಿ ಸತತವಾಗಿ ಏರಿಕೆಯಾಗಿದ್ದ 19 ಕೆಜಿ ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಇದೀಗ ಕೇಂದ್ರ ಸರ್ಕಾರ ಭಾರೀ ಇಳಿಕೆ ಮಾಡಿದೆ. ಮೇ ತಿಂಗಳಲ್ಲಿ ಒಟ್ಟು 93 ರೂಪಾಯಿ ಹಾಗೂ ಜೂನ್ 1ರಂದು ಮತ್ತಷ್ಟು 42 ರೂಪಾಯಿ ಹೆಚ್ಚಳವಾಗಿದ್ದರಿಂದ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿಗೆ ತಲುಪಿತ್ತು.
183.50 ರೂ. ಇಳಿಕೆ!
ಇದೀಗ ಜುಲೈ 1ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 183.50 ರೂಪಾಯಿ ಇಳಿಕೆ ಮಾಡಲಾಗಿದೆ.
ಇದರಿಂದ ರೆಸ್ಟೋರೆಂಟ್ಗಳು, ಹೋಟೆಲ್ಗಳು, ರಸ್ತೆಬದಿ ಉಪಾಹಾರ ಕೇಂದ್ರಗಳು ಹಾಗೂ ಕ್ಯಾಟರಿಂಗ್ ಸೇವೆಗಳ ನಿರ್ವಹಣಾ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ.
ಇದನ್ನು ಓದಿ : LPG ಗ್ರಾಹಕರೇ ಗಮನಿಸಿ! ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಬಂದ್ ಆಗುವ ಸಾಧ್ಯತೆ..!!

ಸರ್ಕಾರವು ಮಹತ್ವದ ನಿರ್ಧಾರ
ಇದರ ಜೊತೆಗೆ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಲಭ್ಯತೆಯನ್ನು ಸಮತೋಲನದಲ್ಲಿಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಅನ್ನು ಪ್ರತಿ ಲೀಟರ್ಗೆ 1.50 ರೂಪಾಯಿಯಿಂದ 4 ರೂಪಾಯಿಗೆ ಹೆಚ್ಚಿಸಿದೆ. ಈ ಪರಿಷ್ಕರಣೆ ಕೂಡ ಜುಲೈ 1ರಿಂದಲೇ ಜಾರಿಗೆ ಬಂದಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಳಿತ, ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಬೆಳವಣಿಗೆಗಳಿಗೆ ಅನುಗುಣವಾಗಿ ಇಂತಹ ತೆರಿಗೆ ಹಾಗೂ ಸುಂಕಗಳನ್ನು ಕಾಲಕಾಲಕ್ಕೆ ಮರುಪರಿಶೀಲಿಸಲಾಗುತ್ತದೆ.

19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಇದು ಮೊದಲ ಕಡಿತ
ವಾಣಿಜ್ಯ ಎಲ್ಪಿಜಿ ದರ ಇಳಿಕೆಯು 19 ಕೆಜಿ ಸಿಲಿಂಡರ್ಗಳನ್ನು ಹೆಚ್ಚಾಗಿ ಅವಲಂಬಿಸಿರುವ ರೆಸ್ಟೋರೆಂಟ್ಗಳು, ಹೋಟೆಲ್ಗಳು, ರಸ್ತೆಬದಿಯ ಉಪಾಹಾರ ಗೃಹಗಳು ಮತ್ತು ಕ್ಯಾಟರಿಂಗ್ ಸೇವೆಗಳ ದೈನಂದಿನ ನಿರ್ವಹಣಾ ವೆಚ್ಚವನ್ನು ನೇರವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ.
ಇದನ್ನು ನೋಡಿ : ಮೂಲ ಸೌರ್ಕಯಗಳಿಲ್ಲದೇ ಗ್ರಾಮಸ್ಥರ ನರಳಾಟ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ





