DELHI : ಜಂತರ್ ಮಂತರ್ ಪ್ರತಿಭಟನೆಗೆ ಸುಪ್ರೀಂ ಕೋರ್ಟ್ ಗರಂ!

ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಯಾವುದೇ ಗುಂಪು ಸಾರ್ವಜನಿಕ ಅಥವಾ ನಿಗದಿತ ಪ್ರತಿಭಟನಾ ಸ್ಥಳವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗರಂ ಆಗಿದೆ.
DELHI ಯ ಸರಣಿ ಹೋರಾಟಗಳಿಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಜಂತರ್ ಮಂತರ್ನಂತಹ ನಿಗದಿತ ಪ್ರತಿಭಟನಾ ಸ್ಥಳಗಳಿಗೂ ನಿರ್ದಿಷ್ಟ ಅವಧಿಗೆ ಮಾತ್ರ ಅವಕಾಶ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಂದ, ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ, ವ್ಯಾಪಾರಿಗಳ ಸಂಘಟನೆ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
READ THIS : ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ – ಮೂವರು ಮಾಜಿ ಸಿಎಂ ವಶಕ್ಕೆ!

ಮುಂದಿನ ಕ್ರಮಗಳೇನು?
ಇನ್ನು ಪ್ರತಿಭಟನೆಯ ಹಕ್ಕಿನ ಜೊತೆಗೆ ಇತರ ನಾಗರಿಕರ ವ್ಯಾಪಾರ ಮತ್ತು ಜೀವನೋಪಾಯದ ಹಕ್ಕನ್ನೂ ಪರಿಗಣಿಸಬೇಕಿದೆ ಎಂದು ಕೋರ್ಟ್ ಒತ್ತಿ ಹೇಳಿದೆ.
ನಿಗದಿತ ಪ್ರತಿಭಟನಾ ಸ್ಥಳಗಳಲ್ಲಿ ಕಾಲಮಿತಿ ನಿಗದಿಪಡಿಸುವ ವಿಚಾರದಲ್ಲಿ ಮುಂದಿನ ಕ್ರಮಗಳೇನು ಎಂಬುದನ್ನು ಕಾದುನೋಡಬೇಕಿದೆ.

MUST WATCH : ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್! – ಇಂದೇ ಬಸ್ ದರದ ಬಿಗ್ ಡಿಸಿಷನ್!




