
ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಕಬ್ಬು ದರ ಸಭೆ ವಿಫಲ – ಇಂದು ಮತ್ತೆ CM ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ
ಕಬ್ಬಿನ ದರ ನಿಗದಿ ವಿಚಾರವಾಗಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಮತ್ತೆ ಒಮ್ಮತ ಮೂಡಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೆ ಮುಕ್ತಾಯವಾಗಿದ್ದು, ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯುವ ಸಾಧ್ಯತೆ ಇದೆ.
ಮೊದಲ ಕಂತಿನಲ್ಲಿ ₹3,500 ನೀಡಲು ಕಾರ್ಖಾನೆಗಳ ಪ್ರಸ್ತಾವನೆ
ಬೆಳಗಾವಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಮೊದಲ ಕಂತಿನಲ್ಲಿ ಟನ್ ಕಬ್ಬಿಗೆ 3,500 ರೂಪಾಯಿ ನೀಡುತ್ತೇವೆ. ಸಕ್ಕರೆಯ ಪ್ರತಿ ಕೆ.ಜಿ. ದರ 50 ರೂಪಾಯಿ ಹೆಚ್ಚಳವಾದರೆ, ಎರಡನೇ ಕಂತಿನಲ್ಲಿ 500 ರೂಪಾಯಿ ನೀಡುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
READ THIS : ಛಿದ್ರವಾಯ್ತಾ ಸಿದ್ದು ಟೀಂ? ಮೈಸೂರಲ್ಲಿ ಸಚಿವ ಸ್ಥಾನ ವಂಚಿತರ ದಿಢೀರ್ ಸಭೆ

ಎರಡನೇ ಕಂತಿನಲ್ಲಿ ಹೆಚ್ಚುವರಿ ₹500 ನೀಡಬೇಕು
ಆದರೆ ಕಾರ್ಖಾನೆ ಮಾಲೀಕರ ಈ ಪ್ರಸ್ತಾವನೆಗೆ ರೈತ ಮುಖಂಡರು ಒಪ್ಪಿಗೆ ಸೂಚಿಸಿಲ್ಲ. ಟನ್ ಕಬ್ಬಿಗೆ ಮೊದಲ ಕಂತಿನಲ್ಲೇ 4 ಸಾವಿರ ರೂಪಾಯಿ ನೀಡಬೇಕು. ಜೊತೆಗೆ ಎರಡನೇ ಕಂತಿನಲ್ಲಿ 500 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ. ಇದರಿಂದ ಎರಡೂ ಕಡೆಯವರ ನಡುವೆ ಒಮ್ಮತ ಮೂಡದೆ ಸಭೆ ವಿಫಲವಾಗಿದೆ ಎನ್ನಲಾಗಿದೆ.
ಇಂದು CM ನೇತೃತ್ವದಲ್ಲಿ ಮತ್ತೆ ಸಭೆ ಸಾಧ್ಯತೆ
ಇನ್ನು ಕಬ್ಬಿನ ದರದ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಬಿಕ್ಕಟ್ಟು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ರೈತರ ಬೇಡಿಕೆಗೆ ಪರಿಹಾರ ಸಿಗುತ್ತಾ ಎಂಸು ಕಾದುನೋಡಬೇಕಿದೆ.

MUST WATCH : ಸಾಲು ಸಾಲು ಪ್ರತಿಭಟನೆಗೆ ಸುಪ್ರೀಂ ಗರಂ – ದೆಹಲಿ ಪ್ರತಿಭಟನೆಗೆ ಬೀಳುತ್ತಾ ಬ್ರೇಕ್..!




