
ಅಂಕ ಕಡಿಮೆ ಬಂತು ಅಂತಾ SUICIDE ಗೆ ಯತ್ನ – ಯುವಕರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿನಿಯ ರಕ್ಷಣೆ
ವಿಜಯನಗರ ಮೂಲದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದಿದ್ದ ವಿದ್ಯಾರ್ಥಿನಿ
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಆಕೆ, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರೂ ಅಂಕ ಕಡಿಮೆಯಾಗಿದ್ದರಿಂದ ಕಳೆದ ಐದಾರು ತಿಂಗಳಿಂದ ಮಾನಸಿಕವಾಗಿ ನೊಂದಿದ್ದಳು. ಕುಟುಂಬಸ್ಥರು ಧೈರ್ಯ ತುಂಬಿದರೂ ಆಕೆ ನೋವಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
READ THIS : ಗಂಡನ ಕಾಟಕ್ಕೆ ಬೇಸತ್ತು ಅಮಾಯಕ ಹೆಂಡ್ತಿ ಸೂಸೈಡ್!

SUICIDE – ಯುವಕರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿನಿಯ ರಕ್ಷಣೆ
ಇದೇ ನೋವಿನಲ್ಲಿ ದಾವಣಗೆರೆಗೆ ಬಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಅಲ್ಲಿದ್ದ ಯುವಕರು ಸಮಯಪ್ರಜ್ಞೆ ಮೆರೆದು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ.
ಘಟನೆಯಲ್ಲಿ ವಿದ್ಯಾರ್ಥಿನಿಗೆ ಗಾಯಗಳಾಗಿದ್ದು, ತಕ್ಷಣ ನಗರದ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಹುಬ್ಬಳ್ಳಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

MUST WATCH : ಡಿ ಬಾಸ್ ಗಾಗಿ ಪತ್ನಿಯ ವಿಶೇಷ ಪೂಜೆ ಕರೆಕಲ್ಲಮ್ಮ ದೇವಿಯ ಮೊರೆ ಹೋದ ವಿಜಯಲಕ್ಷ್ಮಿ




