Tumakuru : ಗಂಡನ ಕಾಟಕ್ಕೆ ಬೇಸತ್ತು ಹೆಂಡ್ತಿ ಸೂಸೈಡ್ – ತಾಯಿ ಇಲ್ಲದೇ ತಬ್ಬಲಿ ಆದ ಮಕ್ಕಳು

ಗಂಡನ ಕಾಟಕ್ಕೆ ಬೇಸತ್ತ ಅಮಾಯಕ ಹೆಂಡ್ತಿ ನೇಣಿಗೆ ಶರಣಾಗಿದ್ದು, ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ. Tumakuru ತಾಲೂಕಿನ ಕುಂಕುಮನಹಳ್ಳಿ ಗ್ರಾಮದ ಕಲಾವತಿ ಎಂಬ ಯುವತಿಯನ್ನು ನೆಲಮಂಗಲ ಬಳಿಯ ರಾಯನ್ ನಗರದ ಹನುಮಂತರಾಜು ಎಂಬುವರಿಗೆ ಕೊಟ್ಟು 2020ರಲ್ಲಿ ಮದುವೆ ಮಾಡಿಕೊಡಲಾಗಿತ್ತು.
ದಂಪತಿ ಮಧ್ಯೆ ಆಗಾಗೆ ಗಲಾಟೆ
ಗಂಡ ಹನುಮಂತರಾಜು ನೆಲಮಂಗಲ ತಹಶೀಲ್ದಾರ್ ಅವರ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ . ಮದುವೆಯಾದ ಆರಂಭದಲ್ಲಿ ಇವರ ಸಂಸಾರ ನೌಕೆ ಚೆನ್ನಾಗಿಯೇ ಸಾಗ್ತಾ ಇತ್ತು. ಆದ್ರೆ ಇಬ್ಬರು ಮಕ್ಕಳಾದ ಮೇಲೆ ಗಂಡ ಹನುಮಂತರಾಜು ಹಾಗೂ ಹೆಂಡ್ತಿ ಕಲಾವತಿ ಮಧ್ಯೆ ಮನಸ್ತಾಪ ಶುರುವಾಗಿದ್ದು, ದಂಪತಿ ಮಧ್ಯೆ ಆಗಾಗೆ ಗಲಾಟೆ ಆಗ್ತಾ ಇತ್ತು.

ರಾಜೀಸಂಧಾನ ಮಾಡಿ ಮತ್ತೆ ಕಲಾವತಿಯನ್ನು ಗಂಡನ ಮನೆಗೆ ಕಳುಹಿಸಲಾಗಿತ್ತು
ಇನ್ನು ಕಳೆದ ಮೂರು ವರ್ಷದ ಹಿಂದೆ ದಂಪತಿ ನಡುವೆ ದೊಡ್ಡದಾಗಿ ಜಗಳವಾಗಿದ್ದು, ಯುವತಿ ಕಲಾವತಿ ಪೋಷಕರು ನೆಲಮಂಗಲದಲ್ಲಿದ್ದ ಗಂಡನ ಮನೆಗೆ ಹೋಗಿ ತಮ್ಮ ಮಗಳು ಕಲಾವತಿಯನ್ನು ಕುಂಕುಮನಹಳ್ಳಿ ಗೆ ಕರೆದುಕೊಂಡು ಬಂದಿದ್ದರು. ಸ್ವಲ್ಪ ದಿನ ಆದಮೇಲೆ ರಾಜೀಸಂಧಾನ ಮಾಡಿ ಮತ್ತೆ ಕಲಾವತಿಯನ್ನು ಗಂಡನ ಮನೆಗೆ ಕಳುಹಿಸಲಾಗಿತ್ತು. ಆದ್ರೆ ಎಲ್ಲ ಸರಿಹೋಗುತ್ತೆ ಅಂತಾ ಆಸೆ ಇಟ್ಟುಕೊಂಡಿದ್ದ ಕಲಾವತಿಗೆ ನಿರಾಸೆ ಜಾಸ್ತಿ ಆಗಿತ್ತು. ಪದೇ ಪದೇ ಗಂಡನ ಜೊತೆ ಜಗಳ ಆಗ್ತಾ ಇದ್ದರಿಂದ ಹೆಂಡ್ತಿ ಕಲಾವತಿ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ವಾಪಸ್ ಬಂದಿದ್ದಳು. ಇತ್ತ ಹೆಂಡ್ತಿ ತವರು ಮನೆ ಸೇರಿದ್ದಕ್ಕೆ ಗಂಡ ಹನುಮಂತರಾಜುವಿನ ಕೋಪ ನೆತ್ತಿಗೇರಿತ್ತು. ಹೀಗಾಗಿ ಹೆಂಡ್ತಿ ಕಲಾವತಿ ಜೊತೆ ಇದ್ದ ಮಗನನ್ನು ಗಂಡ ಹನುಮಂತರಾಜು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ನಂತೆ.
ಇದನ್ನು ಓದಿ : 42 ವರ್ಷದ ಆಂಟಿ ಬ್ಲಾಕ್ ಮೇಲ್ಗೆ ಸಿಲುಕಿ ಜಿಮ್ ಟ್ರೈನರ್ Suicide!
ನನಗೂ ನಿನಗೂ ಯಾವುದೇ ಸಂಬಂಧ ಇಲ್ಲ
ಇತ್ತ ಮಗ ಹಾಗೂ ಗಂಡ ನನ್ನ ಜೊತೆಯಲ್ಲಿ ಇಲ್ಲ ಅಂತಾ ದಿನ ಕೊರಗುತ್ತಿದ್ದ ಕಲಾವತಿ, ತನ್ನ ಗಂಡ ಆಗ ಬಂದು ಕರೆಯುತ್ತಾನೆ ಈಗ ಬಂದು ಕರೆದುಕೊಂಡು ಹೋಗುತ್ತಾನೆ ಅಂತಾ ಕಲಾವತಿ ದಿನ ಎದುರು ನೋಡ್ತಾ ಇದ್ದಳು. ಆದರೆ ತನ್ನ ಗಂಡ ಬಂದು ತನ್ನೊಟ್ಟಿಗೆ ಕರೆದುಕೊಂಡು ಹೋಗದ ಹಿನ್ನೆಲೆ ನಿನ್ನೆ ಕಲಾವತಿ ಗಂಡನಿಗೆ ಕರೆ ಮಾಡಿ ತನ್ನ ಮಗನನ್ನು ಒಂದು ಬಾರಿ ತಂದು ತೋರಿಸುವಂತೆ ಬೇಡಿಕೊಂಡಿದ್ದಳು, ಆದರೆ ಅದಕ್ಕೆ ಒಪ್ಪದ ಗಂಡ ಕೋಪದಿಂದ ನನಗೂ ನಿನಗೂ ಯಾವುದೇ ಸಂಬಂಧ ಇಲ್ಲ ಅಂತ ಹೇಳಿ ಕಾಲ್ ಕಟ್ ಮಾಡಿದ್ದ. ಇನ್ನು ಪದೇ ಪದೇ ಕರೆ ಮಾಡಿದರು ಉತ್ತರಿಸಿದ ಕಾರಣ ಮನನೊಂದ ಹೆಂಡ್ತಿ ಕಲಾವತಿ ಮನೆಯಲ್ಲಿ ಯಾರು ಇಲ್ಲದ ಟೈಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಮ್ಮ ಮಗಳ ಸಾವಿಗೆ ಅವಳ ಗಂಡನೇ ಕಾರಣ
ಹೆಂಡ್ತಿಯ ಒಂದು ಕ್ಷಣದ ಆತುರದ ನಿರ್ಧಾರದಿಂದ ತಂದೆಯ ಜೊತೆ ಇದ್ದ 6 ವರ್ಷದ ಮಗ ತಾಯಿಯನ್ನು ಕಳೆದುಕೊಂಡಿದ್ದರೆ, ತಾಯಿ ಬಳಿ ಇದ್ದ 4 ವರ್ಷದ ಮಗಳು ತಾಯಿ ಹಾಗೂ ತಂದೆಯ ಪ್ರೀತಿ ಇಲ್ಲದೆ ತಬ್ಬಲಿಯಾಗಿದ್ದಾಳೆ. ಹೆಂಡ್ತಿ ಕಲಾವತಿ ಆತ್ಮಹತ್ಯೆಯಿಂದ ಆಕೆಯ ಹೆತ್ತವರ ಆಕ್ರಂಧನ ಮುಗಿಲುಮುಟ್ಟಿದೆ. ನಮ್ಮ ಮಗಳ ಸಾವಿಗೆ ಅವಳ ಗಂಡನೇ ಕಾರಣ, ಅವರು ಕೊಟ್ಟಿರುವ ಕಾಟಕ್ಕಾಗಿಯೇ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಸಾಯುವ ಮುನ್ನ ಗಂಡನಿಗೆ ಕರೆ ಮಾಡಿ ತನ್ನ ಮಗನನ್ನು ತೋರುವಂತೆ ಕೇಳಿಕೊಂಡಿದ್ದಾಳೆ ಆದರೆ ಅವನು ಆಗಲ್ಲ ಎಂದಿದ್ದಕ್ಕೆ ಅವಳು ನೊಂದು ಈ ರೀತಿ ಮಾಡಿಕೊಂಡಿದ್ದಾಳೆ . ಈಗ ಮಕ್ಕಳು ತಬ್ಬಲಿಯಾಗಿದ್ದಾರೆ, ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತಾ ಕಲಾವತಿ ತಾಯಿ ರೋಧಿಸಿದ್ರು. ಸದ್ಯ ಈ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನು ನೋಡಿ : ತುಮಕೂರಿನ ಹಳೆ ಜಿಲ್ಲಾಸ್ಪತ್ರೆ ಕಟ್ಟಡ ನೆನಪು ಮಾತ್ರ – ಹಳೆಯ ಜಾಗದಲ್ಲಿ ನಿರ್ಮಾಣ ಆಗಲಿದೆ ಹೊಸ ಕಟ್ಟಡ




