CM DK ಶಿವಕುಮಾರ್ ಕಾಲ್ ಬೆನ್ನಲ್ಲೇ ಗುಬ್ಬಿ ವಾಸಣ್ಣ ಉಲ್ಟಾ.?

CM DK ಶಿವಕುಮಾರ್ ಪೋನ್ ಮಾಡಿ ಬಳಿಕ ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಇದೀಗ ತಮ್ಮ ಮಾತಿನ ಧಾಟಿಯನ್ನೇ ಬದಲಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಕರೆ ಮಾಡಿ ಮಾತನಾಡಿದ ಬಳಿಕ, ನನಗೆ ಯಾವುದೇ ಅಸಮಾಧಾನ ಇಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
SR ಶ್ರೀನಿವಾಸ್ CM DK ಕರೆ ಬಳಿಕ ಹೀಗ್ಯಾಕಂದ್ರು .!
ನಿನ್ನೆ ಸಿಎಂ ಅವರು ನನಗೆ ಕರೆ ಮಾಡಿ ಮಾತನಾಡಿದ್ದು ನಿಜ. ಏನು ಮಾತಡಿದ್ರು ಅಂತ ಹೇಳೋಕೆ ಆಗಲ್ಲ. ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. KSRTC ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಹೊರಟಿದ್ದೆ. ಆದ್ರೆ ಎಲ್ಲಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಸಾಮೂಹಿಕವಾಗಿ ಬದಲಾವಣೆ ಮಾಡ್ತೀವಿ ಅಂತಾ ಸ್ವತಃ ಸಿಎಂ ಹೇಳಿದ್ದಾರೆ. ಹೀಗಾಗಿ ನಾನು ರಾಜೀನಾಮೆ ಕೊಡೋ ಅವಶ್ಯಕತೆ ಇಲ್ಲ.

ಇನ್ನು ಸಿಎಂ ಮಾತ್ರವಲ್ಲದೆ ಸಚಿವರಾದ ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವರು ನನಗೆ ಕರೆ ಮಾಡಿದ್ದಾರೆ. ನಾನು ಅಸಮಾಧಾನಗೊಂಡಿದ್ದೇನೆ ಎಂದು ಅವರು ಅಂದುಕೊಂಡಿದ್ದರು. ಆದ್ರೆ ನನಗೆ ಯಾವುದೇ ಅಸಮಾಧಾನ ಇಲ್ಲ ಅಂತಾ ಶ್ರೀನಿವಾಸ್ ಹೇಳಿದ್ದಾರೆ.
ಇದೇ ವೇಳೆ 33 ಪರ್ಸೆಂಟ್ ಮಹಿಳಾ ಮೀಸಲಾತಿ ಪರವಾಗಿರುವ ನಾವು, ಮಹಿಳೆಯರಿಗೆ ಸಚಿವ ಸ್ಥಾನಮಾನ ನೀಡದೇ ಹೋದ್ರೆ ಹೇಗೆ ಅಂತಾ ಪ್ರಶ್ನಿಸಿರುವ ಶ್ರೀನಿವಾಸ್, ಈಗಲೂ ಕಾಲ ಮಿಂಚಿಲ್ಲ. ಸಿಎಂ ಬಳಿ ಇರುವ ಮತ್ತೊಂದು ಖಾತೆಯನ್ನು ಮಹಿಳೆಯರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ವಾಸಣ್ಣ KSRTC ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ!
ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ ಗುಬ್ಬಿ ಶಾಸಕ.!
ಇನ್ನು ವಾಸಣ್ಣ ಎಚ್.ಡಿ. ಕುಮಾರಸ್ವಾಮಿ ಅವರನ್ನು ನೆನಪಿಸಿಕೊಂಡಿದ್ದಾರೆ. ನನಗೆ ಸಚಿವ ಸ್ಥಾನ ಸಿಗೋದೇ ಇಲ್ಲ ಅಂತಾ ಮನೆಯಲ್ಲಿ ಕುಳಿತಿದ್ದಾಗ ಕುಮಾರಸ್ವಾಮಿ ಅವರೇ ಕರೆ ಮಾಡಿ ಸಚಿವರನ್ನಾಗಿ ಮಾಡಿದ್ರು. ಅದನ್ನ ನಾನು ಯಾವತ್ತೂ ಮರೆಯಲ್ಲ ಅಂತಾ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.

ದೇವೇಗೌಡರು ಕುಂಚಿಟಿಗರ ಕೋಟಾದಲ್ಲಿ ಸತ್ಯನಾರಾಯಣ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದರು. ಆದ್ರೆ ಕುಮಾರಸ್ವಾಮಿ ನನಗೆ ಕರೆದು ಸಚಿವ ಸ್ಥಾನ ಕೊಟ್ಟರು. ನನ್ನ ಮತ್ತು ಕುಮಾರಸ್ವಾಮಿ ನಡುವೆ ಒಂದೇ ಒಂದು ವಿಚಾರಕ್ಕೆ ಭಿನ್ನಾಭಿಪ್ರಾಯ ಆಗಿತ್ತು. ಅದನ್ನ ಬಿಟ್ಟರೆ ನಮ್ಮಿಬ್ಬರ ನಡುವೆ ಏನುಇಲ್ಲ ಅಂತ ಹೇಳಿದ್ದಾರೆ.
ಒಂದು ಕಾಲದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಜೆಡಿಎಸ್ ತೊರೆದಿದ್ದ ಎಸ್.ಆರ್. ಶ್ರೀನಿವಾಸ್ ಇದೀಗ ಮತ್ತೆ ಕುಮಾರಸ್ವಾಮಿ ಅವರನ್ನೇ ಹಾಡಿ ಹೊಗಳಿರೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಿಎಂ ಡಿಕೆಶಿ ಕರೆ ಬಳಿಕ ಕಾಂಗ್ರೆಸ್ನಲ್ಲೇ ಮುಂದುವರಿಯುತ್ತಾರಾ..? ಅಥವಾ ಹಳೇ ಸ್ನೇಹಿತ ಕುಮಾರಸ್ವಾಮಿ ಜೊತೆ ಮತ್ತೆ ಕೈಜೋಡಿಸ್ತಾರಾ..? ಎಂಬ ಪ್ರಶ್ನೆ ಇದೀಗ ಕುತೂಹಲ ಮೂಡಿಸಿದೆ.
MUST WATCH : ಗುಬ್ಬಿ VASANNAಗೆ DKS ಮನವೊಲಿಕೆ.. – 10 ಬಾರಿ ಕರೆ ಮಾಡಿದ್ರೂ ಜಗ್ಗದ SRINIVAS




