Release ಆದ ಬೆನ್ನಲ್ಲೇ ಡಮ್ಮಿ ಸಿಎಂ ಎಂದು ವಿಜಯ್ಗೆ ಉದಯನಿಧಿ ಟಾಂಗ್

ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಡಿಎಂಕೆ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ಗೆ ಇದೀಗ ಜಾಮೀನು ಸಿಕ್ಕಿದೆ. ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಜಾಮೀನು ಪಡೆದುಕೊಂಡ ಉದಯನಿಧಿ, ತಡರಾತ್ರಿ ಚೆನ್ನೈಗೆ ವಾಪಸ್ ಆಗಿದ್ದಾರೆ.
ತ್ರಿಷಾ ವಿರುದ್ಧ ಹೇಳಿಕೆ.. ಉದಯನಿಧಿಗೆ ಜಾಮೀನು
ಇನ್ನು ಪೊಲೀಸ್ ಠಾಣೆಯಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಉದಯನಿಧಿ ಸ್ಟಾಲಿನ್ಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದ್ದಾರೆ. ಇದೇ ವೇಳೆ ಸಿಎಂ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ಉದಯನಿಧಿ ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಉದಯನಿಧಿ, ಸಿಎಂ ವಿಜಯ್ ಅವರನ್ನು ಡಮ್ಮಿ ಸಿಎಂ ಹಾಗೂ ರೀಲ್ಸ್ ಕ್ರಿಯೇಟರ್ ಎಂದು ಟೀಕಿಸಿದ್ದಾರೆ.

ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದ ಸರ್ಕಾರ, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದೆ ಎಂದು ಉದಯನಿಧಿ ಆರೋಪಿಸಿದ್ದಾರೆ. ಕಾವೇರಿ ನೀರು ಹಾಗೂ ರೈತರ ಸಮಸ್ಯೆ ವಿಚಾರದಲ್ಲಿ ಟಿವಿಕೆ ಸರ್ಕಾರ ವಿಫಲವಾಗಿದೆ. ತನ್ನ ವೈಫಲ್ಯವನ್ನು ಮುಚ್ಚಿಹಾಕಲು ತಮ್ಮ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿಎಂ ಕರೆ ಬಳಿಕ ಶಾಸಕ ಎಸ್.ಆರ್. ಶ್ರೀನಿವಾಸ್ ಯೂಟರ್ನ್.!?
ಇನ್ನು ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಉದಯನಿಧಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ಮಹಿಳೆಯರನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ನನ್ನ ಮಾತಿನ ಉದ್ದೇಶ ರೈತರ ಸಮಸ್ಯೆ ಹಾಗೂ ಅವರಿಗೆ ನೀರು ಒದಗಿಸುವ ವಿಚಾರವಾಗಿತ್ತು ಎಂದು ಹೇಳಿದ್ದಾರೆ. ರೈತರ ಪರವಾಗಿ ನೂರು ಬಾರಿ ಬೇಕಾದರೂ ಮಾತನಾಡುತ್ತೇನೆ ಎಂದು ಗುಡುಗಿದ್ದಾರೆ.

ಸುಳ್ಳು ಪ್ರಕರಣಗಳು ಹಾಗೂ ಬೆದರಿಕೆಗಳಿಗೆ ತಾವು ಎಂದಿಗೂ ಹೆದರುವುದಿಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ. ತಮ್ಮ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಡಿಎಂಕೆ ಕಾರ್ಯಕರ್ತರು ಹಾಗೂ ಮೈತ್ರಿ ಪಕ್ಷಗಳ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
MUST WATCH : ಪಾವಗಡದಲ್ಲಿ ತುಪ್ಪದ ಬೆಡಗಿಯ ಕ್ರೇಜ್ – RAGINI ಜೊತೆ SELFIEಗೆ ಮುಗಿಬಿದ್ದ ಹೈಕ್ಳು




