Chemical ಲಿಕೇಜ್ ಆಗಿ ಮೂವರು ಕಾರ್ಮಿಕರು ಸಾ*

ಯಾದಗಿರಿ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಭೀಕರ ದುರಂತ ಸಂಭವಿಸಿದೆ. ಖಾಸಗಿ ಕೆಮಿಕಲ್ ಲ್ಯಾಬೋರೇಟರಿಯಲ್ಲಿ ವಿಷಕಾರಿ ಕೆಮಿಕಲ್ ಸೋರಿಕೆಯಾಗಿದ್ದು, ಉಸಿರುಗಟ್ಟಿ ಮೂವರು ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದ್ರಿಂದ ಕೈಗಾರಿಕಾ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ
Chemical ಫ್ಯಾಕ್ಟರಿಯಲ್ಲಿ ಘೋರ ದುರಂತ..!
ಕಡೇಚೂರು–ಬಾಡಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕೆಮಿಕಲ್ ಲ್ಯಾಬೋರೇಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಫ್ಯಾಕ್ಟರಿಯ ಕೆಮಿಕಲ್ ಸ್ಕ್ರಬರ್ನಲ್ಲಿ ಏಕಾಏಕಿ ಸೋರಿಕೆ ಉಂಟಾಗಿದ್ದರಿಂದ, ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಮೃತಪಟ್ಟವರು ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ಮೂಲದ ಕಾರ್ಮಿಕರು ಎನ್ನಲಾಗಿದೆ.
ಇದನ್ನೂ ಓದಿ : ಬಿಡುಗಡೆ ಬೆನ್ನಲ್ಲೇ ಸಿಎಂ ವಿಜಯ್ ವಿರುದ್ಧ ಉದಯನಿಧಿ ಕಿಡಿ.!

ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಮೂವರು ಕಾರ್ಮಿಕರ ದುರ್ಮರಣ
ಇನ್ನು ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ ಬೆನ್ನಲ್ಲೇ ಫ್ಯಾಕ್ಟರಿ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಮುಂದಾದ್ರು. ಇದು ಅಪಾಯಕಾರಿ ಫ್ಯಾಕ್ಟರಿ ಇದನ್ನು ಕೂಡಲೇ ಬಂದ್ ಮಾಡಿ ಎಂದು ಪಟ್ಟು ಹಿಡಿದಿದ್ರು. ಅಲ್ದೇ ಅಪಾಯಕಾರಿ ಇದೆ ಅಂತಾ ಗೊತ್ತಿದ್ರು ಹೇಗೆ ಅನುಮತಿ ನೀಡಿದ್ರಿ. ಕೂಡಲೇ ಈ ಫ್ಯಾಕ್ಟರಿಯನ್ನು ಬಂದ್ ಮಾಡಿ ಎಂದು ಪ್ರತಿಭಟನೆ ನಡೆಸಿದ್ರು… ಪೊಲೀಸರು ಮಧ್ಯ ಪ್ರವೇಶಿಸಿ ಜನರನ್ನು ನಿಯಂತ್ರಿಸಿದ್ರು. ಈ ವೇಳೆ ಡಿವೈಎಸ್ಪಿಯನ್ನು ಜನರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿತು.

ಇನ್ನು, ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಘಟನೆ ಬಗ್ಗೆ ಡಿಸಿಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದೇನೆ. ಅಲ್ದೇ ಈ ಬಗ್ಗೆ ಕೈಗಾರಿಕೆ ಸಚಿವರಿಗೆ ಹಾಗೂ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮಾತನಾಡಿದ್ದು, ಮೃತ ಕುಟುಂಬದ ಸದಸ್ಯರಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ರು
ಸದ್ಯ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಕೆಮಿಕಲ್ ದುರಂತದ ಬಗ್ಗೆ ಅಸಲಿ ಕಾರಣ ತಿಳಿದುಬರಲಿದೆ.
MUST WATCH : ದಲಿತರ ಮೇಲೆ ಇದೆಂಥಾ ದೌರ್ಜನ್ಯ? – ಗ್ರಾಮದಿಂದ ಬಹಿಷ್ಕಾರ ಹಾಕಿ ಹಲ್ಲೆ..!?




