TET ಪಾಸ್ ಮಾಡಲು ಶಿಕ್ಷಕರಿಗೆ ಹೆಚ್ಚುವರಿ ಕಾಲಾವಕಾಶ

TET ಪರೀಕ್ಷೆ ಕಡ್ಡಾಯ ಅಂತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಆದ್ರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀಡಿದ್ದ ಗಡುವನ್ನ ಒಂದು ವರ್ಷ ವಿಸ್ತರಿಸಲಾಗಿದೆ.
ಸರ್ಕಾರಿ ಶಿಕ್ಷಕರಿಗೆ TET ಕಡ್ಡಾಯ
ಈ ಹಿಂದೆ ಟಿಇಟಿ ಅರ್ಹತೆ ಪಡೆಯಲು 2027ರ ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಈ ಗಡುವನ್ನ ಮತ್ತೊಂದು ವರ್ಷ ವಿಸ್ತರಿಸಿ, 2028ರ ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಇನ್ನು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಂದ್ರೆ RTE ಕಾಯ್ದೆಯಡಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕವಾಗಲು ಹಾಗೂ ಸೇವೆಯಲ್ಲಿ ಮುಂದುವರಿಯಲು ಟಿಇಟಿ ಕನಿಷ್ಠ ಅರ್ಹತೆಯಾಗಿದೆ. 2025ರ ಸೆಪ್ಟೆಂಬರ್ 1ರಂದು ನೀಡಿದ್ದ ತೀರ್ಪಿನಲ್ಲೂ ಸುಪ್ರೀಂ ಕೋರ್ಟ್ ಇದೇ ನಿಯಮವನ್ನ ಪುನರುಚ್ಚರಿಸಿತ್ತು.
ಇದನ್ನೂ ಓದಿ: Chemical ಫ್ಯಾಕ್ಟರಿಯಲ್ಲಿ ಘೋರ ದುರಂತ..!

2028ರ ಆಗಸ್ಟ್ 31ರವರೆಗೆ ಕಾಲಾವಕಾಶ
ಶಿಕ್ಷಕರಿಗೆ ಅನುಕೂಲವಾಗುವಂತೆ ಸರ್ಕಾರ ವರ್ಷಕ್ಕೆ ಎರಡು ಬಾರಿ, ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಇದರಿಂದ ಅರ್ಹತೆ ಪಡೆಯಬೇಕಿರುವ ಶಿಕ್ಷಕರು ನಿಗದಿತ ಅವಧಿಯೊಳಗೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅವಕಾಶ ಸಿಗಲಿದೆ.
ಈ ಕಡ್ಡಾಯ ನಿಯಮದಿಂದ 2013ಕ್ಕೂ ಮೊದಲು ನೇಮಕಗೊಂಡಿರುವ ಕೆಲವು ಶಿಕ್ಷಕರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತಹ ಶಿಕ್ಷಕರ ಸೇವಾ ದಾಖಲೆಗಳು ಹಾಗೂ ಸಂಪೂರ್ಣ ವಿವರಗಳು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ, ಸರ್ಕಾರಿ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯವಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದೀಗ 2028ರ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ ಸಿಕ್ಕಿದೆ. ರಾಜ್ಯ ಸರ್ಕಾರಗಳು ನಿಯಮಿತವಾಗಿ TET ಪರೀಕ್ಷೆ ನಡೆಸಿದ್ರೆ, ಅರ್ಹತೆ ಪಡೆಯಬೇಕಿರುವ ಶಿಕ್ಷಕರಿಗೂ ಇದರಿಂದ ಅನುಕೂಲವಾಗಲಿದೆ.
MUST WATCH : ಭಾರೀ ಮಳೆಗೆ ಮತ್ತೆ ಗುಡ್ಡ ಕುಸಿತ – ಹೆದ್ದಾರಿಗೆ ಉರುಳಿದ ಬೃಹತ್ ಬಂಡೆ-ಮಣ್ಣು




