Dharwad : ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ : ದಪ್ಪ ಇದ್ದಾಳೆಂದು ಹೆಂಡತಿಯನ್ನೇ ಕೊಲೆಗೈದ ಪತಿ.!

ಪ್ರೀತಿ, ವಿಶ್ವಾಸದಿಂದ ಬಾಳಬೇಕಾದ ಪತಿಯೇ ರಕ್ಕಸನಾಗಿ ಬದಲಾದ ಘೋರ ಘಟನೆಯೊಂದು ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ. ಹೆಂಡತಿ ದಪ್ಪಗಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಪತಿ ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದಲ್ಲಿ ಬೆಚ್ಚಿ ಬೀಳಿಸೋ ಘಟನೆ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 29 ವರ್ಷದ ಪ್ರಿಯಾಂಕಾ ಕಮಲಾಕರ್ ಕೊಲೆಯಾದ ಮಹಿಳೆಯಾಗಿದ್ದಾಳೆ. ಪತ್ನಿಯನ್ನೇ ಯಮನ ಲೋಕಕ್ಕೆ ಕಳುಹಿಸಿದ ಪಾಪಿ ಪತಿಯನ್ನು ಬಸವರಾಜ್ ವಡ್ಡಾರ್. ಹೆಂಡತಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಬಸವರಾಜ್ ದಿನನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಕೇವಲ ತಾನೊಬ್ಬನೇ ಅಲ್ಲದೆ, ಇನ್ನೂ ಮೂವರ ಜೊತೆ ಸೇರಿಕೊಂಡು ಕ್ರೂರವಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಇದನ್ನು ಓದಿ : PG ಮುಂದೆ ಮದ್ಯಪಾನ ಮಾಡಬೇಡಿ ಎಂದು ಹೇಳಿದಕ್ಕೆ ಮಾಲೀಕನ ಭೀಕರ ಕೊಲೆ..!

ದಪ್ಪ ಇದ್ದಾಳೆಂದು ಕೊಲೆ!
ಬಸವರಾಜ್ ಮತ್ತು ಪ್ರಿಯಾಂಕಾ 2014ರಲ್ಲಿ ಮದುವೆಯಾಗಿದ್ರು. ಆರಂಭದಲ್ಲಿ ಸುಖಕರವಾಗಿದ್ದ ದಾಂಪತ್ಯ ಜೀವನ, ನಂತರ ಕಲಹಕ್ಕೆ ತಿರುಗಿತ್ತು. ಪತ್ನಿಯ ದೇಹದ ಬಗ್ಗೆ ಅವಹೇಳನ ಮಾಡುತ್ತಿದ್ದ ಆರೋಪದ ಜೊತೆಗೆ, ತವರು ಮನೆಯಿಂದ ಹೆಚ್ಚುವರಿ ಚಿನ್ನ ಮತ್ತು ಹಣ ತರಬೇಕೆಂದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಬಸವರಾಜ್ ಹಾಗೂ ಆತನಿಗೆ ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲು
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ನವಲಗುಂದ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನುಆರೋಪಿ ಬಸವರಾಜ್ ಹಾಗೂ ಆತನಿಗೆ ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನು ನೋಡಿ : ಡಿಕೆಶಿಗೆ ಆಪ್ತ ಶಾಸಕರಿಂದಲೇ ಶಾಕ್ – ಲಿಂಕ್ ಕೆನಾಲ್ ವಿರುದ್ಧ ಸಿಡಿದೆದ್ದ ಗುಬ್ಬಿ ವಾಸಣ್ಣ




