
KPSC Scam – BJP ಮುಖಂಡ ಬಸವರಾಜ್ ಕನ್ನಾಳೆ ಮನೆಯನ್ನೇ ಜಪ್ತಿ ಮಾಡಿದ ಸಿಐಡಿ!
ಪಶುವೈದ್ಯಕೀಯ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿರುವ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಮನೆಯನ್ನು ಸಿಐಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಬಾಲ್ಕಿ ಮೂಲದ ಬಸವರಾಜ್
ಬೀದರ್ ಜಿಲ್ಲೆಯ ಬಾಲ್ಕಿ ಮೂಲದ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದ ಬಳಿಕ ಸಿಐಡಿ ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡು ಬೆಂಗಳೂರಿನ ಸಂಜಯನಗರದ ವಿನಾಯಕ ಲೇಔಟ್ನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
REDA THIS : ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ – ಬಸವರಾಜ್ ಕನ್ನಾಳೆ CID ವಶಕ್ಕೆ

ಬಸವರಾಜ್ ಕನ್ನಾಳೆ ಮನೆಯನ್ನೇ ಜಪ್ತಿ!
ನ್ಯಾಯಾಲಯದ ಅನುಮತಿ ಪಡೆದು ಮನೆಗೆ ತೆರಳಿದ ಸಿಐಡಿ ಅಧಿಕಾರಿಗಳು ಕೆಲಕಾಲ ಮನೆಯಲ್ಲಿದ್ದ ದಾಖಲೆಗಳು ಹಾಗೂ ಇತರೆ ವಸ್ತುಗಳನ್ನು ಪರಿಶೀಲಿಸಿ ಶೋಧ ಕಾರ್ಯ ನಡೆಸಿದ್ದಾರೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಮನೆಯನ್ನು ಸೀಜ್ ಮಾಡಿ ತಮ್ಮ ಕಂಟ್ರೋಲ್ಗೆ ಪಡೆದಿದೆ.
ಕೆಲವು ಅಭ್ಯರ್ಥಿಗಳೊಂದಿಗೆ ಮಾತುಕತೆ
ಪಶುವೈದ್ಯಕೀಯ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿಸಿರುವ ಸಿಐಡಿಗೆ, ಬಸವರಾಜ್ ಕನ್ನಾಳೆ ಅವರು ಕೆಲವು ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ (DVR) ಅನ್ನು ಕೂಡ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಡಿವಿಆರ್ನಲ್ಲಿರುವ ದೃಶ್ಯಗಳು ತನಿಖೆಗೆ ಪ್ರಮುಖ ಸುಳಿವು ನೀಡುವ ಸಾಧ್ಯತೆಯಿದ್ದು, ಅದರ ಆಧಾರದ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
MUST WATCH : NEPAL ಪ್ರವಾಹದಲ್ಲಿ ಕನ್ನಡಿಗರು ಕಣ್ಮರೆ – ತುಮಕೂರಲ್ಲಿ ಸಹೋದರಿ ಆತಂಕ.!




