
BIGG BOSS : ಯಾರೇ ಬಿಟ್ಟರೂ ಕರ್ಮ ಬಿಡಲಿಲ್ಲ; ಮಾಡಿದ ತಪ್ಪಿಗೆ ಸೌಂದರ್ಯಾಗೆ ದೊಡ್ಡ ಶಿಕ್ಷೆ!
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಅವರ ವರ್ತನೆ ಇದೀಗ ಚರ್ಚೆಗೆ ಕಾರಣವಾಗಿದೆ. ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಸೌಂದರ್ಯಾ, ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಮ್ಮ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿರುವ ಅವರು, ಇದೀಗ ಕಣ್ಣೀರು ಹಾಕಿದ್ದಾರೆ.
ಅವಕಾಶ ಸಿಗಲೇ ಇಲ್ಲ
ಆಸಿಯಾ ಫಿರ್ದೋಸ್ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ಆಡಲು ಮುಂದಾದರು. ಅವರು ಹಠ ಬಿಡದೆ ಟಾಸ್ಕ್ ಆಡುತ್ತೇನೆ ಎಂದು ಕುಳಿತರು.
ಆದರೆ, ಇದಕ್ಕೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಕೆಲವರು ಇದನ್ನು ವಿರೋಧಿಸಿದರು. ಆಸಿಯಾ ಅವರೇ ಹೇಳಿಕೊಂಡಂತೆ ಈ ರೀತಿಯ ಸ್ಥಿತಿಯಲ್ಲಿ ಅವರಿಗೆ ಕಣ್ಣೀರು ಬರುತ್ತದೆಯಂತೆ. ಆಗಲೂ ಹಾಗೆಯೇ ಆಯಿತು.

‘ನನಗೆ ಅನ್ಯಾಯ ಆಗುತ್ತಿದೆ’ ಎಂಬರ್ಥದಲ್ಲಿ ಆಸಿಯಾ ಮಾತನಾಡುತ್ತಿದ್ದಂತೆ, ಸೌಂದರ್ಯಾ ಶೆಟ್ಟಿ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಆಸಿಯಾ ಅಳುತ್ತಿದ್ದ ರೀತಿಯನ್ನು ಅನುಕರಿಸುತ್ತಾ ಸೌಂದರ್ಯಾ ಅಣಕಿಸಿದ್ರು. ಆದ್ರೆ ಸೌಂದರ್ಯಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ.
READ THIS : ಬಿಗ್ ಬಾಸ್ಗೆ ಹೋಗೋ ಘಟಾನುಘಟಿ ಸ್ಪರ್ಧಿಗಳು ಇವರೇ ನೋಡಿ!
ವಿಮಾನದ ಸಣ್ಣ ಜಾಗದಲ್ಲಿ ಕಣ್ಣೀರು ಹಾಕಿದ ನಟಿ
ಸೌಂದರ್ಯಾ ಶೆಟ್ಟಿ ಅವರು ಈ ವಾರ ಬಿಗ್ ಬಾಸ್ ಮನೆಯಲ್ಲಿರೋ ವಿಮಾನದಲ್ಲಿ ವಾಸವಿದ್ದಾರೆ. ಅಲ್ಲಿ ಜಾಗ ಕಿರಿದು. ವಿಮಾನದೊಳಗೆ ಜಾಗ ಕಿರಿದಾಗಿರುವ ಕಾರಣ, ಸಣ್ಣದಾಗಿ ಮಾತನಾಡಿದರೂ ದೊಡ್ಡದಾಗಿ ಕೇಳಿಸುತ್ತೆ. ಈ ನಡುವೆ ‘ಮಾಡರ್ನ್ ಮಹಾಕವಿ’ ಮಂಜು ಮಾತನಾಡಿದ್ದು ಸೌಂದರ್ಯಾ ಅವರಿಗೆ ಇರಿಟೇಶನ್ ಆಗಿದೆ. ಇದರಿಂದ ಬೇಸರಗೊಂಡ ಸೌಂದರ್ಯಾ ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲದೆ, ವಿಮಾನದ ಡೋರ್ ತೆರೆಯಲು ಕೂಡ ಅವರು ಪ್ರಯತ್ನಿಸಿದ್ದಾರೆ. ಆದರೆ, ಡೋರ್ ತೆರೆಯಲು ಸಾಧ್ಯವಾಗಿಲ್ಲ.

ಸಹ ಸ್ಪರ್ಧಿಗಳು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸೌಂದರ್ಯಾ ಸಮಾಧಾನವಾಗಲಿಲ್ಲ. ಕೊನೆಗೆ ವಿಮಾನದಿಂದ ಹೊರಬಂದು ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಕಣ್ಣೀರಿಟ್ಟಿದ್ದಾರೆ.
MUST WATCH : ರಾಜಣ್ಣಗೆ ತಪ್ಪಿದ ಅಪೆಕ್ಸ್ ಅಧ್ಯಕ್ಷ ಗಾದಿ – ಈ ಬಗ್ಗೆ DCM PARAMESHWAR ಏನಂದ್ರು..?




