
Bigg Boss : ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋಗೆ ಕೌಂಟ್ಡೌನ್ – ದೊಡ್ಮನೆಗೆ ಬರೋ ಕಂಟೆಸ್ಟೆಂಟ್ಗಳು ಯಾರು?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಓಪನಿಂಗ್ಗೆ ಕ್ಷಣಗಣನೆ ಶುರುವಾಗಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರಲಿರುವ ಈ ಸೀಸನ್ನಲ್ಲಿ ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗ್ತಿದೆ.
ಈ ಬಾರಿ ಒಟ್ಟು 18 ಸ್ಪರ್ಧಿಗಳು ಫೈನಲ್ ಆಗಿದ್ದು, ಸಿನಿಮಾ, ಕಿರುತೆರೆ, ಕಾಮಿಡಿ, ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಚಿತ ಮುಖಗಳು ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರಯಾಣದ ಥೀಮ್ನಲ್ಲಿ ಹೊಸ ಬಿಗ್ಬಾಸ್ ಮನೆ
‘ಬಿಗ್ಬಾಸ್ ಕನ್ನಡ ಸೀಸನ್ 13’ರ ಅದ್ಧೂರಿ ಲಾಂಚ್ಗಾಗಿ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಸಮೀಪ ಹೊಸ ಬಿಗ್ಬಾಸ್ ಮನೆಯನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ಈ ಬಾರಿ ಮನೆಯ ವಿನ್ಯಾಸದಲ್ಲಿ ‘ಪ್ರಯಾಣ’ದ ಥೀಮ್ ಪ್ರಮುಖ ಆಕರ್ಷಣೆಯಾಗಲಿದೆ. ಈ ನಡುವೆ ಕಿಚ್ಚ ಸುದೀಪ್ ಅವರು ಬಿಗ್ಬಾಸ್ ತಂಡವನ್ನು ಭೇಟಿ ಮಾಡಿದ್ದು, ಹೊಸ ಫೋಟೋಶೂಟ್ಗಳನ್ನೂ ಆರಂಭಿಸಿದ್ದಾರೆ.
READ THIS : ಬಿಗ್ ಬಾಸ್ ಕನ್ನಡ ಶೋಗೆ ಶಾಕ್ ಕೊಟ್ಟ ಸಚಿವ ರಾಮಲಿಂಗಾರೆಡ್ಡಿ!
ದೊಡ್ಮನೆಗೆ ಎಂಟ್ರಿ ಕೊಡಲಿರುವ 11 ಸಂಭಾವ್ಯ ಸ್ಪರ್ಧಿಗಳು
ಸದ್ಯ ಮೂಲಗಳ ಪ್ರಕಾರ, ಈ ಕೆಳಗಿನ 11 ಹೆಸರುಗಳು Bigg Boss Kannada ಸೀಸನ್ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ.

ಸೋನಿ ಮುಲೆವಾ – ‘ಬೆಂಗಳೂರು ಬಾಯ್ಸ್’ ಸಿನಿಮಾದಲ್ಲಿ ನಟಿಸಿರುವ ಸೋನಿ ಮುಲೆವಾ, ನಟನೆಯ ಜೊತೆಗೆ ಇನ್ಸ್ಟಾಗ್ರಾಂ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅನನ್ಯಾ ಅಮರ್ – ನಟಿ ಹಾಗೂ ಗಾಯಕಿ ಅಂಕಿತಾ ಅಮರ್ ಅವರ ಸಹೋದರಿ ಅನನ್ಯಾ ಅಮರ್ ಅವರ ಹೆಸರು ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಹಾಡುಗಾರಿಕೆ ಮತ್ತು ನೃತ್ಯದಲ್ಲೂ ಅವರು ಆಸಕ್ತಿ ಹೊಂದಿದ್ದಾರೆ.
ಸೌಂದರ್ಯಾ ಶೆಟ್ಟಿ – ಮಂಗಳೂರು ಮೂಲದ ನಟಿ ಸೌಂದರ್ಯಾ ಶೆಟ್ಟಿ ಅವರ ಹೆಸರೂ ಪ್ರಮುಖವಾಗಿ ಕೇಳಿಬರುತ್ತಿದೆ. ಹಿಂದಿಯ ‘ಸ್ಪ್ಲಿಟ್ಸ್ವಿಲ್ಲಾ’ ರಿಯಾಲಿಟಿ ಶೋನಲ್ಲೂ ಅವರು ಕಾಣಿಸಿಕೊಂಡಿದ್ದರು.
ಆಸಿಯಾ ಫಿರ್ದೋಸ್ – ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ಸೇರಿದಂತೆ ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಆಸಿಯಾ ಫಿರ್ದೋಸ್ ಅವರ ಹೆಸರು ಕೂಡ ಬಿಗ್ಬಾಸ್ ಪಟ್ಟಿಯಲ್ಲಿದೆ.
ಸಂಗೀತಾ ಭಟ್ – ಕನ್ನಡ ಚಿತ್ರರಂಗದ ಪರಿಚಿತ ನಟಿ ಸಂಗೀತಾ ಭಟ್ ಅವರ ಹೆಸರೂ ಸೀಸನ್ 13ಕ್ಕೆ ಕೇಳಿಬರುತ್ತಿದೆ. ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಆಸಿಯಾ ಬೇಗಂ – ‘ಕ್ವಾಟ್ಲೆ ಕಿಚನ್’, ‘ಭರ್ಜರಿ ಬ್ಯಾಚ್ಯುಲರ್’ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಆಸಿಯಾ ಬೇಗಂ ಕೂಡ ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಡ್ರ್ಯಾಗನ್ ಮಂಜು – ತಮ್ಮ ದೈತ್ಯ ದೇಹ ಮತ್ತು ಫಿಟ್ನೆಸ್ನಿಂದ ಗಮನ ಸೆಳೆದಿರುವ ಡ್ರ್ಯಾಗನ್ ಮಂಜು ಅವರ ಹೆಸರು ಕೂಡ ಪಟ್ಟಿಯಲ್ಲಿದೆ. ದುನಿಯಾ ವಿಜಯ್ ಅಭಿನಯದ ‘ಭೀಮಾ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಜಗ್ಗ ಮಮ್ಮಿ – ‘ಲವ್ ಮಾಕ್ಟೇಲ್ 2’ ಸಿನಿಮಾದ ಹಾಸ್ಯಪಾತ್ರದ ಮೂಲಕ ಗುರುತಿಸಿಕೊಂಡಿರುವ ಜಗ್ಗ ಮಮ್ಮಿ ಅವರು ದೊಡ್ಮನೆಗೆ ಬಂದರೆ ಮನರಂಜನೆಗೆ ಕೊರತೆಯಾಗದು ಎಂಬ ನಿರೀಕ್ಷೆ ಮೂಡಿದೆ.
ಸೂರಜ್ – ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿರುವ ಸೂರಜ್ ಅವರ ಹೆಸರೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ.
ತಾಂಡವ್ ರಾಮ್ – ಕಿರುತೆರೆಯ ಜನಪ್ರಿಯ ನಟ ತಾಂಡವ್ ರಾಮ್ ಅವರು ‘ಜೋಡಿ ಹಕ್ಕಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕ್ವಾಟ್ಲೆ ಕಿಚನ್’ನಂತಹ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸಿದ್ದಾರೆ.

ರೈತ ಸಜೀವ್ – ಕೋಲಾರ ಜಿಲ್ಲೆಯ ರೈತ ಸಜೀವ್ ಅವರ ಹೆಸರು ಕೂಡ ಬಿಗ್ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಕೃಷಿಯ ಜೊತೆಗೆ ಹೂವಿನ ವ್ಯಾಪಾರ ಹಾಗೂ ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ ಐಷಾರಾಮಿ ಜೀವನಶೈಲಿ ಮತ್ತು ದುಬಾರಿ ವಾಹನಗಳ ಮೇಲಿನ ಆಸಕ್ತಿಯಿಂದ ಗಮನ ಸೆಳೆದಿದ್ದಾರೆ ಎನ್ನಲಾಗಿದೆ.
ಇನ್ನೂ 7 ಸ್ಪರ್ಧಿಗಳು ಯಾರು?
ಒಟ್ಟು 18 ಸ್ಪರ್ಧಿಗಳು ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದ್ದರೂ, ಸದ್ಯ 11 ಮಂದಿಯ ಹೆಸರುಗಳು ಮಾತ್ರ ವಿವಿಧ ಮೂಲಗಳ ಮೂಲಕ ಕೇಳಿಬರುತ್ತಿವೆ.
ಉಳಿದ 7 ಸ್ಪರ್ಧಿಗಳ ಹೆಸರುಗಳು ಇನ್ನೂ ಸಂಪೂರ್ಣವಾಗಿ ಬಹಿರಂಗವಾಗಿಲ್ಲ.
MUST WATCH : ದೊರೆ ಅಂತ ಕರಿಬೇಡಿ ಎಂದ DKS – ಡಿಕೆಶಿಗೆ VIJAYENDRA ಫುಲ್ ಕ್ಲಾಸ್..!





