
ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಅನ್ನ-ನೀರಿಗೆ ಸಂಕಷ್ಟ: Kodi Shri ಸ್ಫೋಟಕ ಭವಿಷ್ಯ!
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಡಳಿದ್ದು, ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಅನ್ನ-ನೀರಿಗೆ ತತ್ವಾರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಯಲಹಂಕ ಸಮೀಪದ ಬಂಡಿಕೋಡಿಗೆಹಳ್ಳಿಯ ಶನೇಶ್ವರ ದೇವಾಲಯದಲ್ಲಿ ನಡೆದ ನಾಲ್ಕನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪ ಹಾಗೂ ಕಾಲಮಾನ ಬದಲಾವಣೆಗಳ ಕುರಿತು ಎಚ್ಚರಿಕೆ ನೀಡಿದರು.
ಆರಂಭಿಕ ಮುಂಗಾರು ಕೈಕೊಡುವ ಮುನ್ಸೂಚನೆ
ರಾಜ್ಯದಲ್ಲಿ ಆರಂಭಿಕ ಹಂತದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವ ಸಾಧ್ಯತೆಯಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು Kodi Shri ಹೇಳಿದರು.
ಆದರೆ ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುವ ನಿರೀಕ್ಷೆಯಿದೆ ಎಂದು ಅವರು ಸ್ಪಷ್ಟಪಡಿಸಿದರು.
READ THIS : ವಚನಾನಂದ ಶ್ರೀಗಳ ವಿರುದ್ಧ POCSO ಪ್ರಕರಣ – ಇಂದು ಹೈಕೋರ್ಟ್ನಲ್ಲಿ ಜಾಮೀನು ಭವಿಷ್ಯ ನಿರ್ಧಾರ..!!

ನೇಪಾಳ ಪ್ರವಾಹಕ್ಕೆ ಮಾನವನ ದುರಾಶೆಯೇ ಕಾರಣ
ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ವಿನಾಶದ ಕುರಿತು ಮಾತನಾಡಿದ ಶ್ರೀಗಳು, ಪ್ರಕೃತಿಯ ಮೇಲಿನ ಮಾನವನ ನಿರಂತರ ದೌರ್ಜನ್ಯವೇ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮಾನವನ ಸ್ವಾರ್ಥ ಮತ್ತು ಅತಿಯಾದ ದುರಾಶೆಯಿಂದ ಭೂಮಿಯನ್ನು ಬೇಕಾಬಿಟ್ಟಿಯಾಗಿ ಅಗೆಯಲಾಗುತ್ತಿದೆ. ಭೂಗರ್ಭದ ಆಧಾರಸ್ತಂಭಗಳಂತಿರುವ ನೈಸರ್ಗಿಕ ಬಂಡೆಗಳನ್ನು ಸ್ಫೋಟಿಸುವ ಮೂಲಕ ಪ್ರಕೃತಿಯ ಸಮತೋಲನವನ್ನು ಹಾಳು ಮಾಡಲಾಗುತ್ತಿದೆ. ಇಂತಹ ಚಟುವಟಿಕೆಗಳ ಪರಿಣಾಮವೇ ಭೀಕರ ದುರಂತಗಳ ರೂಪದಲ್ಲಿ ಮರುಕಳಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನಿಜವಾಗಿತ್ತು Kodi Shri ಗಳು ನುಡಿದಿದ್ದ ಭವಿಷ್ಯಗಳು
ಈ ಹಿಂದೆ ಕೊರೊನಾ ಸಾಂಕ್ರಾಮಿಕ, ಚಂದ್ರಯಾನ ಯಶಸ್ಸು, ಯುದ್ಧದ ಕಾರ್ಮೋಡಗಳು ಹಾಗೂ ರಾಜಕೀಯ ಸ್ಥಿತ್ಯಂತರಗಳ ಕುರಿತು ಕೋಡಿಶ್ರೀಗಳು ನುಡಿದಿದ್ದ ಭವಿಷ್ಯಗಳು ನಿಜವಾಗಿತ್ತು.
ಇದೀಗ ಮಳೆ-ಬರ ಕುರಿತು ನೀಡಿರುವ ಮುನ್ಸೂಚನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

MUST WATCH : ಸಚಿವರ ಸಭೆಯಲ್ಲೇ ವ್ಯಕ್ತಿ ಆ*ಹ*ಗೆ ಯತ್ನ- ಪ್ರಜಾ ಸೇವೆಗೆ ಚಾಲನೆ ವೇಳೆ ಇದೆಂಥಾ ಘಟನೆ



