ಅಕ್ಕ-ತಂಗಿ ನಡುವೆ ಗಲಾಟೆ,ತಂಗಿಯ Suicide .! ಸಾಂಬಾರ್ ಮಾಡುವ ವಿಚಾರಕ್ಕೆ ಬಲಿಯಾಯ್ತಾ ಜೀವ..?

ತುಮಕೂರು ನಗರದ ಜಯನಗರದಲ್ಲಿ ಅಕ್ಕ-ತಂಗಿ ನಡುವೆ ಗಲಾಟೆ ನಡೆದು ತಂಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕ್ಷುಲ್ಲಕ ವಿಚಾರಕ್ಕೆ ಅಕ್ಕ-ತಂಗಿ ನಡುವೆ ಗಲಾಟೆ ನಡೆದಿದ್ದು,ಬಳಿಕ ಮನನೊಂದ 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು Suicide ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
READ THIS : 42 ವರ್ಷದ ಆಂಟಿ ಬ್ಲಾಕ್ ಮೇಲ್ಗೆ ಸಿಲುಕಿ ಜಿಮ್ ಟ್ರೈನರ್ Suicide!

ಆಗಿದ್ದೇನು..?
ಮೃತ ಬಾಲಕಿಯನ್ನು 16 ವರ್ಷದ ಹುಲಿಗಮ್ಮ ಎಂದು ಗುರುತಿಸಲಾಗಿದೆ. ರಾಯಚೂರು ಮೂಲದ ದೇವರಾಜು ಅವರ ಎರಡನೇ ಪುತ್ರಿ ಹುಲಿಗಮ್ಮ, ತುಮಕೂರಿನ ಉಮಾಪ್ರಗತಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಕುಟುಂಬವು ತುಮಕೂರು ನಗರದ ಜಯನಗರ 5ನೇ ಕ್ರಾಸ್ನಲ್ಲಿ ವಾಸವಿದ್ದು,ದೇವರಾಜು ಗೂಡ್ಸ್ ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ಅಕ್ಕ-ತಂಗಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಾಂಬಾರ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಈ ಗಲಾಟೆಯಿಂದ ಮನನೊಂದ ಹುಲಿಗಮ್ಮ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Suicide – ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಹುಲಿಗೆಮ್ಮನನ್ನ ಕಳೆದುಕೊಂಡ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿತ್ತು.
MUST WATCH : ಯೂಟರ್ನ್ ಡಿಕೆ ಶಿವಕುಮಾರ್ ಅಂತಿದ್ದಾರೆ ಎಸ್ ಟರ್ನ್ ವೈ ಟರ್ನ್ ಮಾಡ್ತೀನಿ-ಡಿಕೆಶಿ





