
Bigg Boss : ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ; ಎದೆ ಮೇಲೆ ಕಾಲಿಕ್ತೀನಿ ಎಂದು ಗುಡುಗಿದ ತಾಂಡವ್!
ಬಿಗ್ ಬಾಸ್ ಮನೆಯೊಳಗೆ ನಾಮಿನೇಷನ್ ಪ್ರಕ್ರಿಯೆ ಕಾವೇರಿದ್ದು, ಕಿರಣ್ ಶಾಸ್ತ್ರಿ ಮತ್ತು ತಾಂಡವ್ ರಾಮ್ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ. ಹೌದು.. ಟಾಸ್ಕ್ವೊಂದಕ್ಕೆ ಸಂಬಂಧಿಸಿದ ವಿಚಾರ ನಾಮಿನೇಷನ್ ವೇಳೆ ಮತ್ತೆ ಪ್ರಸ್ತಾಪವಾಗಿದ್ದು, ಇಬ್ಬರೂ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ತಾಂಡವ್ ರಾಮ್ ಜೊತೆ ಜಗಳ
‘ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ನಾಲ್ವರಲ್ಲಿ ಕಿರಣ್ ಶಾಸ್ತ್ರಿ ಕೂಡ ಒಬ್ಬರು.
ಮನೆಯೊಳಗೆ ಬಂದ ಆರಂಭದಲ್ಲೇ ಪ್ರಥಮ ಪ್ರಸಾದ್ ಅವರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಕಿರಣ್, ಇದೀಗ ತಾಂಡವ್ ರಾಮ್ ಜೊತೆಗೂ ಜಗಳಕ್ಕೆ ಇಳಿದಿದ್ದಾರೆ.

ಟಾಸ್ಕ್ ವಿಚಾರಕ್ಕೆ ಶುರುವಾದ ಜಗಳ
ಪೈಲಟ್ ಆಯ್ಕೆಗಾಗಿ ನಡೆದ ಟಾಸ್ಕ್ ವೇಳೆ ಪಂಚೆಯಲ್ಲಿ ವಸ್ತುಗಳನ್ನು ತಂದರೆ ಅವುಗಳನ್ನು ಪರಿಗಣಿಸಬಾರದು ಎಂಬ ನಿಯಮದ ಕುರಿತು ಚರ್ಚೆ ನಡೆದಿದೆ. ಕೊನೆಯ ಸುತ್ತಿನಲ್ಲಿ ಕಿರಣ್ ಶಾಸ್ತ್ರಿ ಪಂಚೆಯಲ್ಲಿ ವಸ್ತುಗಳನ್ನು ತಂದಿದ್ದರು.
ಈ ಹಿನ್ನೆಲೆಯಲ್ಲಿ ಕಿರಣ್ ಅವರನ್ನು ಆಟದಿಂದ ಹೊರಗಿಡಬೇಕು ಎಂದು ಕೆಲವರು ಒತ್ತಾಯಿಸಿದ್ದರು. ಆದರೆ ಪಂಚೆಯಲ್ಲಿ ವಸ್ತುಗಳನ್ನು ತರಬಾರದು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದು ಕಿರಣ್ ಅವರ ವಾದವಾಗಿತ್ತು. ಪಂಚೆಯಲ್ಲಿ ತಂದ ವಸ್ತುಗಳನ್ನು ಹೊರತುಪಡಿಸಿ ಉಳಿದ ವಸ್ತುಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದರು.
ನಾಮಿನೇಷನ್ ಸಂದರ್ಭದಲ್ಲಿ ತಾಂಡವ್ ರಾಮ್ ಇದೇ ವಿಚಾರವನ್ನು ಪ್ರಸ್ತಾಪಿಸಿದರು. ಇದರಿಂದ ಕಿರಣ್ ಆಕ್ರೋಶಗೊಂಡಿದ್ದು, ತಾಂಡವ್ ವಿರುದ್ಧ ಗರಂ ಆಗಿದ್ದಾರೆ.
READ THIS : ಯಾರೇ ಬಿಟ್ರೂ ಕರ್ಮ ಬಿಡಲಿಲ್ಲ – ಮಾಡಿದ ತಪ್ಪಿಗೆ ಸೌಂದರ್ಯಾಗೆ ದೊಡ್ಡ ಶಿಕ್ಷೆ!

‘ಟಾಸ್ಕ್ ಅರ್ಥ ಮಾಡಿಕೊಳ್ಳದ ದಂಡಪಿಂಡ’ ಎಂದ ಕಿರಣ್
“ಟಾಸ್ಕ್ ಅರ್ಥ ಮಾಡಿಕೊಳ್ಳದ ದಂಡಪಿಂಡ” ಎಂದು ತಾಂಡವ್ ರಾಮ್ ವಿರುದ್ಧ ಕಿರಣ್ ಶಾಸ್ತ್ರಿ ಕಿಡಿಕಾರಿದ್ದು. ಇದಕ್ಕೆ ಪ್ರತಿಕ್ರಿಯಿಸಿದ ತಾಂಡವ್, ತಮಗೆ ನೀಡಿದ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದು ಹೇಳಿದರು.
ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಕಿರಣ್ ಶಾಸ್ತ್ರಿಗೆ ಇಲ್ಲ ಎಂದು ತಾಂಡವ್ ಆರೋಪಿಸಿ, ಕಿರಣ್ ಅವರನ್ನು ನಾಮಿನೇಟ್ ಮಾಡಿದರು. “ಗೆಲ್ಲದಿದ್ದರೆ ತೀರ್ಪು ಕೊಡುವ ಜಡ್ಜ್ಗಳೇ ಸರಿಯಿಲ್ಲ ಎಂದು ಹೇಳುವುದು ಸರಿಯಲ್ಲ. ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ” ಎಂಬುದು ತಾಂಡವ್ ಅವರ ವಾದವಾಗಿತ್ತು.

ಚೀಪ್ ಆಗಿ ಸಂಚು ಮಾಡುವ ಗುಳ್ಳೆ ನರಿ
ಇದಾದ ನಂತರ ಕಿರಣ್ ಅವರು ಕೂಗಾಡಲು ಶುರು ಮಾಡಿದರು. ಚೆನ್ನಾಗಿ ಕನ್ನಡ ಮಾತಾಡೋ ಕೋ’ದಂಡ’ ರಾಮನಿಗೆ ಒಂದು ಟಾಸ್ಕ್ ಅರ್ಥ ಮಾಡಿಕೊಳ್ಳೋಕೆ ಬರಲ್ಲ.
ಚೀಪ್ ಆಗಿ ಸಂಚು ಮಾಡುವ ಗುಳ್ಳೆ ನರಿ ನೀನು. ಬ್ರೇನ್ಲೆಸ್ ಕೋದಂಡ ರಾಮ ನೀನು. ದಂಡಪಿಂಡ ಎಂದು ಹಲವು ಬಾರಿ ಹೇಳಿದರು.
ಟಾಸ್ಕ್ ಮುಗಿದ್ಮೇಲೆ ಮಾತನಾಡಿದರೆ ಎದೆಮೇಲೆ ಕಾಲು ಹಾಕ್ತೀನಿ ಅಂತ ತಾಂಡವ್ ರೊಚ್ಚಿಗೆದ್ದು ಕಿರಣ್ ವಿರುದ್ಧ ಕೂಗಾಡಿದ್ದಾರೆ.
MUST WATCH : CONGRESS ಪಕ್ಷ ರಾಷ್ಟ್ರದ್ರೋಹಿಗಳ ಪರ – BASAVARAJ BOMMAI ಆರೋಪ




