
Chikkanna ನ ಬಾಳಲ್ಲಿ ಶುರುವಾಯ್ತು ‘ಹೊಸ ಸಿನಿಮಾ’! – ‘ಸಿಂಗಲ್’ ಸೀನ್ಗೆ ಫುಲ್ಸ್ಟಾಪ್!
ಸ್ಯಾಂಡಲ್ವುಡ್ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಹಾಗೂ ಮಂಡ್ಯ ಮೂಲದ ಪಾವನಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಇಂದು ಬೆಳಗ್ಗೆ 10.45ರಿಂದ 11.25ರ ನಡುವಿನ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಪ್ತರ ಸಮ್ಮುಖದಲ್ಲಿ ವಿವಾಹ
ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದ್ದು, ನವದಂಪತಿಗೆ ಅಭಿಮಾನಿಗಳು ಹಾಗೂ ಸಿನಿರಂಗದ ಗಣ್ಯರು ಶುಭ ಹಾರೈಸಿದ್ದಾರೆ.
READ THIS : 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೋದು ಖಚಿತ – ಈಶ್ವರಪ್ಪ

ಮೈಸೂರಿನಲ್ಲಿ ಅದ್ದೂರಿ ಆರತಕ್ಷತೆ
ವಿವಾಹಕ್ಕೂ ಮುನ್ನ ನಿನ್ನೆ ಚಿಕ್ಕಣ್ಣ ಅವರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ಡಾಲಿ ಧನಂಜಯ್, ತಾರಾ ಅನುರಾಧ, ಶ್ರೀಮುರಳಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಕೋರಿದ್ದರು.
ಅಭಿಮಾನಿಗಳಿಂದ ಶುಭಾಷಯ
ಹಾಸ್ಯದ ಮೂಲಕ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ ಇದೀಗ ಪಾವನಾ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ನವದಂಪತಿಗೆ ಸಿನಿರಂಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

MUST WATCH : ಭೀಕರ ಅಪಘಾತದಲ್ಲಿ ಕಂದಮ್ಮ ಸೇರಿ ಐವರ ಸಾ* – CC CAMERAದಲ್ಲಿ ಸೆರೆಯಾಯ್ತು ರಣಭೀಕರ ದೃಶ್ಯ




