
ಪ್ರಮೋಷನ್ ನೀಡುವುದಾಗಿ 50 ಸಾವಿರ ರೂ. ಲಂಚ – ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ Suicide
ಪ್ರಮೋಷನ್ ನೀಡುವುದಾಗಿ ₹50 ಸಾವಿರ ಲಂಚ ಪಡೆದು ಬಳಿಕ ಪ್ರಮೋಷನ್ ನೀಡಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಮನನೊಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಸೆಲ್ಫಿ ವೀಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ನಡೆದಿದೆ.
ಪ್ರಮೋಷನ್ ನೀಡುವುದಾಗಿ 50 ಸಾವಿರ ಲಂಚ!
ಮೃತರನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಐಡಿಎಫ್ಸಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಮೋಷನ್ ನೀಡುವುದಾಗಿ ಹೇಳಿ ಬ್ಯಾಂಕ್ ಸಿಬ್ಬಂದಿ ತಿಪ್ಪೇಸ್ವಾಮಿ ಹಾಗೂ ನಕಲಿ ಅಂಕಪಟ್ಟಿ ಮಾಡಿಕೊಟ್ಟ ಕೊಟ್ರೇಶ್ ಅವರ ವಿರುದ್ಧ ಮೋಹನ್ ಆರೋಪ ಮಾಡಿದ್ದಾರೆ.
READ THIS : Bidar ಸಾಲ ತೀರಿಸಲಾಗದೇ ಯುವ ರೈತ ಸೂಸೈಡ್.!

ನಕಲಿ ಅಂಕಪಟ್ಟಿ ಸಿದ್ಧಪಡಿಸಲು ₹50 ಸಾವಿರ ಹಣ
ಪ್ರಮೋಷನ್ಗಾಗಿ ನಕಲಿ ಅಂಕಪಟ್ಟಿ ಸಿದ್ಧಪಡಿಸಲು ₹50 ಸಾವಿರ ಹಣ ಪಡೆದಿದ್ದರು. ಮೋಹನ್ ಸಾಲ ಮಾಡಿ ಹಣ ನೀಡಿದ್ದರು ಎನ್ನಲಾಗಿದೆ. ಆದರೆ ಹಣ ಪಡೆದ ಬಳಿಕವೂ ಪ್ರಮೋಷನ್ ನೀಡದ ಹಿನ್ನೆಲೆಯಲ್ಲಿ ಸಾಲದ ಹೊರೆ ಹೆಚ್ಚಾಗಿ ಮೋಹನ್ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.
ನನ್ನ ಸಾವಿಗೆ ಈ ವಿಚಾರವೇ ಕಾರಣ
ಇನ್ನು ಆತ್ಮಹತ್ಯೆಗೂ ಮುನ್ನ ಮಾಡಿರುವ ಸೆಲ್ಫಿ ವೀಡಿಯೋದಲ್ಲಿ ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿ ತಿಪ್ಪೇಸ್ವಾಮಿ ಹಾಗೂ ನಕಲಿ ಅಂಕಪಟ್ಟಿ ಮಾಡಿಕೊಟ್ಟ ಕೊಟ್ರೇಶ್ ಕಾರಣ ಎಂದು ಮೋಹನ್ ಆರೋಪಿಸಿದ್ದಾರೆ. ಅಲ್ಲದೆ, ತಮಗೆ ನ್ಯಾಯ ಒದಗಿಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೂ ಮನವಿ ಮಾಡಿದ್ದಾರೆ. ಬಳಿಕ ಬೈಕ್ ಸಹಿತ ತುಂಗಾ ನಾಲೆಗೆ ಹಾರಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತುಂಗಾ ನಾಲೆಯಲ್ಲಿ ಬೈಕ್ ಪತ್ತೆಯಾಗಿದ್ದು, ಮೋಹನ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ತನಿಖೆ ಆರಂಭ
ಈ ಘಟನೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ಈ ಬಾರಿ ಶಿರಾದಲ್ಲಿ ಭೀಕರ ಬರದ ಆತಂಕ – ಬರ ಎದುರಿಸಲು JAYACHANDRA MASTER PLAN



