
Murder : ಹೆತ್ತವರನ್ನ ತೊರೆದು ಪ್ರೀತಿ ಹಿಂದೆ ಬಂದವಳು ಲಾಡ್ಜ್ ನಲ್ಲಿ ಗಂಡನಿಂದಲೇ ಕೊಲೆಯಾದ್ಲಾ..?
ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಬದುಕು ನಾಲ್ಕೇ ವರ್ಷದಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಕೌಟುಂಬಿಕ ಕಲಹದ ಹಿನ್ನೆಲೆ ದೂರವಾಗಿದ್ದ ಪತ್ನಿಯನ್ನು ಪುಸಲಾಯಿಸಿ ಲಾಡ್ಜ್ಗೆ ಕರೆತಂದ ಗಂಡ,ಐಡಿ ಕಾರ್ಡ್ ಟ್ಯಾಗ್ನಿಂದ ಕತ್ತು ಬಿಗಿದು Murder ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ದಂಪತಿ ನಡುವೆ ಕಲಹ!
ಸಂತೋಷದ ಬದುಕಿನ ಕನಸು ಕಂಡು ಹೆತ್ತವರನ್ನೇ ತೊರೆದು ಬಂದಿದ್ದ 23 ವರ್ಷದ ವಿದ್ಯಾ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.
ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಮೂಲದ ವಿದ್ಯಾ ಮತ್ತು ಮುದುಗೆರೆ ಗ್ರಾಮದ ಆನಂದ್ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ಆರು ತಿಂಗಳಿಂದ ದಂಪತಿ ನಡುವೆ ಕಲಹ ಉಂಟಾಗಿದ್ದು,ವಿದ್ಯಾ ಗಂಡನಿಂದ ದೂರವಾಗಿ ಬೆಂಗಳೂರಿನಲ್ಲಿ ಪಿಜಿ ಸೇರಿದ್ದಳು.
READ THIS : ಗ್ರಾ. ಪಂಚಾಯ್ತಿ ಕಚೇರಿ ಎದುರೇ ತಂದೆ-ಮಗಳ ಭೀಕರ ಹತ್ಯೆ!

ಲಾಡ್ಜ್ನಲ್ಲಿ ಗಂಡನಿಂದಲೇ ಕೊಲೆಯಾದ್ಲಾ?
ಘಟನೆಯ ದಿನ ಆನಂದ್ ಪತ್ನಿಯನ್ನು ದೊಡ್ಡಬಳ್ಳಾಪುರದ ಎಸ್ಜಿಎಸ್ ಲಾಡ್ಜ್ಗೆ ಕರೆತಂದಿದ್ದಾನೆ. ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರೂ ನಗುತ್ತಾ ಲಾಡ್ಜ್ಗೆ ಪ್ರವೇಶಿಸಿರುವುದು ಕಂಡುಬಂದಿದೆ.
ರಾತ್ರಿ 11:48ಕ್ಕೆ ರೂಮ್ಗೆ ಹೋದ ದಂಪತಿ ಬಳಿಕ ಹೊರಗೆ ಬಂದಿಲ್ಲ. ಆದರೆ ರಾತ್ರಿ 1 ಗಂಟೆ ಸುಮಾರಿಗೆ ಆನಂದ್ ಒಬ್ಬನೇ ರೂಮ್ನಿಂದ ಹೊರಬಂದು ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ ತೆರಳಿದ್ದಾನೆ ಎನ್ನಲಾಗಿದೆ.
ಉಸಿರುಗಟ್ಟಿಸಿ ಕೊಲೆ ಶಂಕೆ
ಐಡಿ ಕಾರ್ಡ್ ಟ್ಯಾಗ್ನಿಂದ ಕತ್ತು ಬಿಗಿದು ವಿದ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. 24 ಗಂಟೆಗಳ ಬಳಿಕ ರೂಂ ತೆರೆಯುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ವಿಚಿತ್ರವೆಂದರೆ, ಪತ್ನಿ ಕಾಣೆಯಾಗಿರುವ ಬಗ್ಗೆ ಇದೇ ಆನಂದ್ ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಎನ್ನಲಾಗಿದೆ. ಆಗ ವಿದ್ಯಾಳನ್ನ ಕರೆಸಿ ಬುದ್ದಿವಾದ ಹೇಳಿ ಮತ್ತೆ ಗಂಡನ ಜೊತೆ ಬಾಳುವಂತೆ ಪೊಲೀಸರು ಆಕೆಯನ್ನ ಕಳುಹಿಸಿದ್ದರು ಎನ್ನಲಾಗಿದೆ.

ಪ್ರೀತಿಯ ಹೆಸರಿನಲ್ಲಿ ಆರಂಭವಾದ ದಾಂಪತ್ಯ ಜೀವನ Murder ನಲ್ಲಿ ಅಂತ್ಯ
ಕೊಲೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು,ಆತನ ಬಂಧನಕ್ಕಾಗಿ ದೊಡ್ಡಬಳ್ಳಾಪುರ ಪೊಲೀಸರು ಬಲೆ ಬೀಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಆರಂಭವಾದ ದಾಂಪತ್ಯ ಜೀವನ ಕೊಲೆಯಲ್ಲಿ ಅಂತ್ಯ ಕಂಡಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಆನಂದ್ ಬಂಧನದ ಬಳಿಕವೇ ಕೊಲೆಗೆ ನಿಖರ ಕಾರಣ ಏನು ಎಂಬುದು ಬಹಿರಂಗವಾಗಬೇಕಿದೆ.
MUST WATCH : CONGRESSಗೆ HARIPRASAD ದೊಡ್ಡ ಮುಳ್ಳು – ಹರಿಪ್ರಸಾದ್ ಹೇಳಿಕೆಗೆ SURESH GOWDA ಕಿಡಿ




