Ramanagara : ವೃಷಭಾವತಿ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ!

Ramanagara ದ ವೃಷಭಾವತಿ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, ಕೆಲಕಾಲ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. 500 ಹಾಗೂ 100 ಮುಖಬೆಲೆಯ ನೋಟುಗಳಂತಿದ್ದ 20ಕ್ಕೂ ಹೆಚ್ಚು ಕಂತೆಗಳು ನದಿಯಲ್ಲಿ ಕಂಡುಬಂದಿವೆ.
READ THIS : ಚಿನ್ನ, ವಜ್ರ, ನಗದು ಸೇರಿ ED ಯಿಂದ ಕೋಟಿ ಕೋಟಿ ಹಣ ಜಪ್ತಿ ..!

ಮಕ್ಕಳ ಆಟಿಕೆಗಾಗಿ ಬಳಸುವ ನಕಲಿ ನೋಟುಗಳು
ನದಿಯಲ್ಲಿ ನೋಟಿನ ಕಂತೆಗಳು ಬಿದ್ದಿರುವುದನ್ನು ಕಂಡ ಸಾರ್ವಜನಿಕರು, ಅಚ್ಚರಿಯಿಂದ ಹತ್ತಿರಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಅವು ಅಸಲಿ ನೋಟುಗಳಲ್ಲ, ಮಕ್ಕಳ ಆಟಿಕೆಗಾಗಿ ಬಳಸುವ ನಕಲಿ ನೋಟುಗಳು ಎಂಬುದು ತಿಳಿದುಬಂದಿದೆ. ಯಾರೋ ಕಿಡಿಗೇಡಿಗಳು ಮಕ್ಕಳ ಆಟಿಕೆ ನೋಟುಗಳನ್ನು ತಂದು ವೃಷಭಾವತಿ ನದಿಯಲ್ಲಿ ಎಸೆದು ಹೋಗಿರಬಹುದು ಎನ್ನಲಾಗಿದೆ.

ಅಸಲಿ ಹಣ ಪತ್ತೆಯಾಗಿದೆ ಎಂಬ ವದಂತಿಗೆ ತೆರೆ
ನೋಟಿನ ಕಂತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಕೆಲಕಾಲ ಕುತೂಹಲ ಹಾಗೂ ಗೊಂದಲ ಉಂಟಾಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ನೋಟುಗಳು ನಕಲಿ ಎಂಬುದು ಖಚಿತವಾಗಿದ್ದು, ಅಸಲಿ ಹಣ ಪತ್ತೆಯಾಗಿದೆ ಎಂಬ ವದಂತಿಗೆ ತೆರೆ ಬಿದ್ದಿದೆ.
MUST WATCH : ನೆಚ್ಚಿನ ನಾಯಕ B.C.NAGESH ಅಸ್ತಂಗತ – ರುದ್ರಭೂಮಿಯತ್ತ ಸಾಗಿದ ಅಂತಿಮಯಾತ್ರೆ




