
RAMANAGARA : ಕಾರಿನಲ್ಲೇ ಕ್ಯಾಬ್ ಚಾಲಕ ಅನುಮಾನಾಸ್ಪದ ಸಾವು – ಹೃದಯಾಘಾತ ಶಂಕೆ
ಕಸ್ಟಮರ್ನ ಡ್ರಾಪ್ ಮಾಡಿ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್ ಬಳಿ ನಡೆದಿದೆ. ಬೆಂಗಳೂರಿನ ಕೆ.ಪಿ. ಅಗ್ರಹಾರ ಮೂಲದ 29 ವರ್ಷದ ಪುಷ್ಪರಾಜ್ ಮೃತ ಕ್ಯಾಬ್ ಚಾಲಕ.
ಆಗಿದ್ದೇನು?
ಇನ್ನು ಪುಷ್ಪರಾಜ್ ಕಸ್ಟಮರ್ವೊಬ್ಬರನ್ನು ತಾವರೆಕೆರೆ ವ್ಯಾಪ್ತಿಗೆ ಡ್ರಾಪ್ ಮಾಡಿದ ಬಳಿಕ ಚಂದ್ರಪ್ಪ ಸರ್ಕಲ್ ಸಮೀಪದ ಲೇಔಟ್ನಲ್ಲಿ ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ. ಆದ್ರೆ ಬೆಳಗ್ಗೆಯಿಂದಲೂ ಕಾರು ಒಂದೇ ಜಾಗದಲ್ಲಿ ನಿಂತಿರುವುದನ್ನ ಗಮನಿಸಿದ ಸ್ಥಳೀಯರಿಗೆ ಅನುಮಾನ ಬಂದಿದೆ.
READ THIS : ಜಿಮ್ ಟ್ರೈನರ್ ನಿಗೂಢ ಸಾವು – ಸ್ನೇಹಿತರೇ ಹಲ್ಲೆಗೈದು ಕೊಲೆ ಮಾಡಿದ್ರಾ.?
ಹಲವು ಗಂಟೆಗಳಾದ್ರೂ ಕಾರು ಅಲ್ಲಿಂದ ತೆರಳದ ಹಿನ್ನೆಲೆ ಸ್ಥಳೀಯರು ಹತ್ತಿರ ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನೊಳಗೆ ಚಾಲಕ ಪುಷ್ಪರಾಜ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಹೃದಯಾಘಾತ ಶಂಕೆ!
ಸದ್ಯ ಪುಷ್ಪರಾಜ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಆದ್ರೆ ಸಾವಿಗೆ ನಿಖರ ಕಾರಣ ಏನು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ಗೊತ್ತಾಗಬೇಕಿದೆ.
RAMANAGARA – ಪೊಲೀಸರು ಭೇಟಿ, ಪರಿಶೀಲನೆ
ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
MUST WATCH : ಬೈಪಾಸ್ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ 23 ಅಡಿ ಗಣಪತಿ ಮೆರವಣಿಗೆಗೆ ಜನಸಾಗರ




