
ಕೋಲಾರ, ಚಿಕ್ಕಬಳ್ಳಾಪುರ ಶಾಸಕರಿಗೆ CM ಡಿಕೆಶಿ ಚಾಟಿ!
ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರ ಜೊತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನೌಪಚಾರಿಕ ಸಭೆ ನಡೆಸಿದ್ದು, ಪಕ್ಷ ಸಂಘಟನೆ ಹಾಗೂ ಜನರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಬಿಟ್ಟು ಒಟ್ಟಾಗಿ ಹೋಗುವಂತೆ ಸ್ಟ್ರಿಕ್ಟ್ ಆಗಿ ಎಚ್ಚರಿಕೆ ನೀಡಿದ್ದಾರೆ.
ರೂಪಕಲಾ vs ನಾರಾಯಣಸ್ವಾಮಿ, ಸುಧಾಕರ್ vs ಪ್ರದೀಪ್ ಈಶ್ವರ್
ಒಂದೆಡೆ ಕೋಲಾರದಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದ್ರೆ, ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.

ಸಿಎಂ ಭೇಟಿ ಮಾಡಿ ಮಾತುಕತೆ
ಕೋಲಾರ ಡಿಸಿಸಿ ಬ್ಯಾಂಕ್ ವಿಚಾರವಾಗಿ ಕೋಲಾರ ಜಿಲ್ಲೆ ಶಾಸಕರಾದ ನಂಜೇಗೌಡ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಶಾಸಕಿ ರೂಪಕಲಾ ಶಶಿಧರ್, ಚಿಕ್ಕಬಳ್ಳಾಪುರ ಜಿಲ್ಲೆ ಶಾಸಕರಾದ ಎಂ.ಸಿ ಸುಧಾಕರ್, ಸುಬ್ಬಾರೆಡ್ಡಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ರು.
READ THIS : ಗ್ಯಾರಂಟಿ ನಿಲ್ಲಿಸೋ ಮಾತೇ ಇಲ್ಲ! ಮಾಜಿ CM ಸಿದ್ದರಾಮಯ್ಯ
ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡಿ ಎಂದು ಎಚ್ಚರಿಕೆ!
ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕರ ಜೊತೆ ಚರ್ಚೆ ನಡೆಸಿರುವ ಸಿಎಂ ಡಿ.ಕೆ. ಶಿವಕುಮಾರ್, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನ ಬದಿಗಿಟ್ಟು ಪಕ್ಷ ಸಂಘಟನೆ ಹಾಗೂ ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ. ಬಹಿರಂಗ ಕಿತ್ತಾಟದಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡಬೇಡಿ. ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡಿ ಎಂದು ಸೂಕ್ಷ್ಮವಾಗಿ ಎಚ್ಚಿಸಿದ್ದಾರೆ.

ಸಿಎಂ ಅಂಗಳ ತಲುಪಿದ `ಕೈ’ ಶಾಸಕರ ಕಿತ್ತಾಟ
ಇನ್ನು ರೂಪಕಲಾ ಶಶಿಧರ್ ಮತ್ತು ನಾರಾಯಣಸ್ವಾಮಿ ನಡುವಿನ ಮುನಿಸು ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲೇ ಬಹಿರಂಗವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾರಾಯಣಸ್ವಾಮಿ, ತಾವು ಮತ್ತು ಸುಬ್ಬಾರೆಡ್ಡಿ ಮಾತನಾಡುತ್ತಿದ್ದ ವೇಳೆ ತಮ್ಮ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ರೂಪಕಲಾ ತಪ್ಪಾಗಿ ಭಾವಿಸಿ ಮೇಜು ತಟ್ಟಿ ನೋಟೀಸ್ ಕೊಟ್ಟಿದ್ದಾರೆ. ನಾವು ಅವರ ಬಗ್ಗೆ ಏನೂ ಮಾತನಾಡಿಲ್ಲ. ಅವರಿಗೆ ಶಕ್ತಿ ಇದೆ, ಹಾಗಾಗಿ ಹೀಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಜೋರಾಯ್ತು ಪ್ರದೀಪ್ ಈಶ್ವರ್ vs ಎಂ.ಸಿ ಸುಧಾಕರ್ ಫೈಟ್
ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲೂ ಡಾ. ಎಂ.ಸಿ. ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ನಡುವಿನ ಭಿನ್ನಮತ ಬಹಿರಂಗವಾಗಿದೆ. ಇತ್ತೀಚಿಗೆ ಸುಧಾಕರ್ ಬೆಂಬಲಿಗರ ಬಣವೊಂದು ಕೆಪಿಸಿಸಿ ಅಧ್ಯಕ್ಷರಿಗೆ ಪ್ರದೀಪ್ ಈಶ್ವರ್ ಕಾರ್ಯವೈಖರಿ ವಿರುದ್ಧ ದೂರು ನೀಡಿದೆ ಎನ್ನಲಾಗಿದೆ. ಇನ್ನು ಇದಕ್ಕೆ ಸಿಟ್ಟಾಗಿರುವ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಪರೋಕ್ಷವಾಗಿ ಟ್ವೀಟ್ವಾರ್ ನಡೆಸಿದ್ದಾರೆ.

ಒಟ್ಟಾರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕಾಂಗ್ರೆಸ್ನ ಆಂತರಿಕ ಭಿನ್ನಾಭಿಪ್ರಾಯಗಳು ಇದೀಗ CM ಅಂಗಳ ತಲುಪಿದ್ದು, ಇನ್ನಾದ್ರೂ ಎರಡೂ ಜಿಲ್ಲೆಗಳ ಕಾಂಗ್ರೆಸ್ ಕಿತ್ತಾಟಕ್ಕೆ ಬ್ರೇಕ್ ಬೀಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
MUST WATCH : ಮಳೆ ಕೈಕೊಟ್ಟು ಒಣಗಿದ ಮೆಕ್ಕೆಜೋಳ ಕೇಂದ್ರ ತಂಡದ ಮುಂದೆ ರೈತನ ಅಳಲು




