
ಬೆಂಗಳೂರು ಜಾತ್ರೆಗೆ ಆಕ್ಷೇಪ – ಬೆಂಗಳೂರಿನ ಸ್ಥಿತಿ ಉಲ್ಲೇಖಿಸಿ ಕಾಂಗ್ರೆಸ್ಗೆ ಕುಟುಕಿದ JDS
ರಾಜ್ಯ ಸರ್ಕಾರ ಆಯೋಜಿಸಲು ಮುಂದಾಗಿರುವ ‘ಬೆಂಗಳೂರು ಜಾತ್ರೆ’ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಹೌದು.. ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರಿನಾದ್ಯಂತ 10 ದಿನಗಳ ಕಾಲ ಬೆಂಗಳೂರು ಜಾತ್ರೆ ಆಯೋಜಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ ಬೆನ್ನಲ್ಲೇ, ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ!
ತನ್ನ ಎಕ್ಸ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ JDS, ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೂ ಟ್ರಾಫಿಕ್ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ನಗರದ ಮೂಲಸೌಕರ್ಯ ಸಮಸ್ಯೆಗಳನ್ನ ಬಗೆಹರಿಸುವ ಬದಲು ಜಾತ್ರೆ ನಡೆಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ಅಲ್ಲದೇ ಬೆಂಗಳೂರು ಜಾತ್ರೆ ಹೆಸರಲ್ಲಿ ಹಣ ದುರ್ಬಳಕೆ ಮಾಡಲು ಹೊರಟಿದ್ದೀರಿ ಎಂದು ಜೆಡಿಎಸ್ ಆರೋಪಿಸಿದೆ.
READ THIS : ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್ಡಿ ಕುಮಾರಸ್ವಾಮಿ.!

200 ಕೋಟಿ ಸುರಿದು ‘ಬೆಂಗಳೂರು ಜಾತ್ರೆ’ ಮಾಡಲು ಯಾರು ಕೇಳಿದ್ರು?
ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ನಿತ್ಯವೂ ರೋಲರ್ ಕೋಸ್ಟರ್ ಅನುಭವ, ಟ್ರಾಫಿಕ್ ಜಾಮ್ನಲ್ಲಿ ವಾಹನಗಳ ಹಾರ್ನ್ಗಳೇ ಸಂಗೀತದ ರಸದೌತಣ. ಇಷ್ಟೆಲ್ಲಾ ‘ಉಚಿತ’ವಾಗಿ ಸಿಗುತ್ತಿರುವಾಗ ಮತ್ತೆ ₹200 ಕೋಟಿ ಸುರಿದು ‘ಬೆಂಗಳೂರು ಜಾತ್ರೆ’ ಯಾರು ಕೇಳಿದ್ರು ಸ್ವಾಮಿ? ರಸ್ತೆ, ನೀರು, ಕರೆಂಟ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ CM ಡಿಕೆಶಿ ಸರ್ಕಾರ, ಈಗ ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಂಸ್ಥೆಗಳ ಹಣವನ್ನು ಕಿತ್ತು ಜಾತ್ರೆಗೆ ಸುರಿದು ಮೋಜು-ಮಸ್ತಿಗೆ ಹೊರಟಿರುವುದು ವಿಪರ್ಯಾಸ ಎಂದು ಜೆಡಿಎಸ್ ಕುಟುಕಿದೆ.
ಪಿಟೀಲು ಬಾರಿಸಿದ ಕಥೆ ನಮಗೆ ಬೇಡ
ಒಂದೆಡೆ ರಾಜ್ಯದ ಅನ್ನದಾತ ಮಳೆ, ಬೆಳೆ ಇಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ರೈತರ ಹೊಟ್ಟೆ ತಣ್ಣಗಿದ್ದರೆ ತಾನೇ ನಾಡಿಗೆ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ? ಈ ಸರ್ಕಾರಕ್ಕೆ ನಿಜವಾಗಿಯೂ ಜನರ ಮೇಲೆ ಕಾಳಜಿ ಇದ್ದರೆ, ಆಡಂಬರದ ಜಾತ್ರೆಗಳನ್ನು ಬಿಟ್ಟು, ಇದರ ಸಂಪೂರ್ಣ ಮೊತ್ತವನ್ನು ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಕೊಡಿ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ ತಿಳಿಸಿದೆ.

MUST WATCH : ಮಾಧ್ಯಮದವರ ಎದುರು ಕಿತ್ತಾಡ್ ಕೊಳ್ತೀರಾ – ಗುಬ್ಬಿಯಲ್ಲಿ ನಾನೇ ಸ್ಪರ್ಧಿಸ್ತೀನಿ ಎಂದ ವಿಜಯೇಂದ್ರ




