KPSC SCAM – ಮಾಜಿ ಅಧ್ಯಕ್ಷನಿಗೆ ಇ.ಡಿ ಸಮನ್ಸ್!

ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಸೇರಿ ನಾಲ್ವರು ಸದಸ್ಯರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸಮನ್ಸ್ ಕೊಟ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮಾರಾಟ ಮಾಡುವ ಡೀಲ್ ಬಗ್ಗೆ ಬಾಯ್ಬಿಟ್ಟಿದ್ದಾರೆ
ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ಚನ್ನೇಗೌಡ ಕುಮಾರ್ ಗಂಗಾಧರ್ ಇ.ಡಿ ಅಧಿಕಾರಿಗಳ ವಿಚಾರಣೆ ವೇಳೆ ಕೆಪಿಎಸ್ಸಿ ಸದಸ್ಯರು ಹಾಗೂ ಇತರರು ಸೇರಿ ಸರ್ಕಾರಿ ಹುದ್ದೆ ಮಾರಾಟ ಮಾಡುವ ಡೀಲ್ ಬಗ್ಗೆ ಬಾಯ್ಬಿಟ್ಟಿದ್ದಾರೆ.
READ THIS : KPSC ಹಗರಣ – ಕಿಂಗ್ಪಿನ್ ಕನ್ನಾಳೆಗೆ ತುಮಕೂರು ವಿವಿ ನೋಟಿಸ್!

ಹಾಲಿ ಮತ್ತು ಮಾಜಿ ಸದಸ್ಯರಿಗೂ ಇ.ಡಿ ವಿಚಾರಣೆಯ ಬಿಸಿ
ತನಿಖೆಯ ಭಾಗವಾಗಿ KPSC ಮಾಜಿ ಅಧ್ಯಕ್ಷ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿ ಮಾಡಿ ಸದ್ಯದಲ್ಲೇ ವಿಚಾರಣೆ ಮಾಡಲಿದ್ದಾರೆ. ಕೆಪಿಎಸ್ಸಿ ನಡೆಸಿದ ಪಶು ವೈದ್ಯಾಧಿಕಾರಿ ಹುದ್ದೆ ಸೇರಿ 13 ನೇಮಕಾತಿಗಳಲ್ಲಿ ನಾಲ್ವರು ಸದಸ್ಯರಿಂದ ಸರ್ಕಾರಿ ಹುದ್ದೆಗಳು ಮಾರಾಟವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆ ಕೆಪಿಎಸ್ಸಿ ಮಾಜಿ ಅಧ್ಯಕ್ಷ, ಹಾಲಿ ಮತ್ತು ಮಾಜಿ ಸದಸ್ಯರಿಗೂ ಇ.ಡಿ ವಿಚಾರಣೆಯ ಬಿಸಿ ತಟ್ಟಲಿದೆ.
ಒಟ್ಟಾರೆ ಸರ್ಕಾರಿ ಉದ್ಯೋಗದ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳ ವಿಶ್ವಾಸಕ್ಕೆ ಸಂಬಂಧಿಸಿದ KPSC ನೇಮಕಾತಿಗಳ ಮೇಲೆ ಕೇಳಿಬಂದಿರುವ ಈ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ.

MUST WATCH : ಕ್ರೀಡಾಪಟುಗಳ ಗೌರವ ವಿಚಾರಕ್ಕೆ ಸ್ಪಷ್ಟನೆ ನಾಳೆ ಗುಡ್ನ್ಯೂಸ್ ಕೊಡ್ತೀವಿ ಎಂದ ಪರಂ




