
ನವರಾತ್ರಿ ಹಬ್ಬಕ್ಕೆ GRUHALAKSHMI ಯರಿಗೆ ಸಿಹಿಸುದ್ದಿ – ಬ್ಯಾಂಕ್ ಅಕೌಂಟ್ಗೆ ಜಮೆಯಾಗಲಿದೆ ಹಣ
ನವರಾತ್ರಿ ಹಬ್ಬಕ್ಕೆ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಯೋಜನೆಯ 33ನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2 ಸಾವಿರ ರೂಪಾಯಿ ಹಣ ಹಂತ ಹಂತವಾಗಿ ಜಮೆಯಾಗುವ ನಿರೀಕ್ಷೆ ಇದೆ.

33ನೇ ಕಂತಿನ ಹಣ ಬಿಡುಗಡೆ ಯಾವಾಗ?
ಹೌದು.. ರಾಜ್ಯದಲ್ಲಿ GRUHALAKSHMI ಯೋಜನೆಯ ಫಲಾನುಭವಿಗಳ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸುವುದು ಸೇರಿದಂತೆ ಅರ್ಹತೆ ಪರಿಶೀಲನೆ ನಡೆಯುತ್ತಿದ್ದರೂ, ಈಗಾಗಲೇ ಅರ್ಹರಾಗಿರುವ ಮಹಿಳೆಯರಿಗೆ ಸಿಗಬೇಕಾದ ಹಣಕ್ಕೆ ತಡೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ 33ನೇ ಕಂತಿನ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.
READ THIS : ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ – ಹಬ್ಬಕ್ಕೆ ಅಕೌಂಟ್ಗೆ ಬರಲಿದೆ ಹಣ

ಮಹಿಳೆಯರಿಗೆ ಆರ್ಥಿಕ ನೆರವು ಸಿಗಬೇಕು
ಪರಿಷ್ಕರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ತಡೆಹಿಡಿಯಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಹಣ ಬಿಡುಗಡೆಗೆ ಅನುಮತಿ ನೀಡಿದೆ.

ಹಂತ ಹಂತವಾಗಿ GRUHALAKSHMI ಹಣ ಜಮೆ
ಹೀಗಾಗಿ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿಗಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ಹಬ್ಬದ ಹೊತ್ತಲ್ಲೇ ಹಣ ಸಿಗುವ ನಿರೀಕ್ಷೆ ಮೂಡಿದೆ. ಹಣ ಬಿಡುಗಡೆ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ ಎಂದು ವರದಿಯಾಗಿದೆ.

MUST WATCH : ಸೌಜನ್ಯ ಕೇಸ್ ಮರು ತನಿಖೆ – DC ಕಚೇರಿಗೆ SIT ಟೀಂ ಎಂಟ್ರಿ




