CHIKKABALLAPURA : ಶ್ರೀನಿವಾಸ ಸಾಗರ ಡ್ಯಾಮ್ನಲ್ಲಿ ಮುಳುಗಿ ತಾಯಿ, ಮಗ ದುರ್ಮರಣ – ತಂದೆ, ಮಗಳು ಪಾರು

ಗಾಂಧಿ ಜಯಂತಿ ರಜೆ ಹಿನ್ನೆಲೆ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದ ವೇಳೆ ಘೋರ ದುರಂತ ಸಂಭವಿಸಿದೆ. ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನೀರಿನಲ್ಲಿ ಮುಳುಗಿ ತಾಯಿ ಹಾಗೂ ಮಗ ಸಾವನ್ನಪ್ಪಿದ್ದು, ತಂದೆ ಹಾಗೂ ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ತಾಯಿ-ಮಗ ದಾರುಣ ಸಾವು!
39 ವರ್ಷದ ರೇಖಾ ಹಾಗೂ 19 ವರ್ಷದ ಹೇಮಂತ್ ಮೃತ ದುರ್ದೈವಿಗಳಾಗಿದ್ದಾರೆ. ಆಟೋ ಚಾಲಕರಾಗಿರುವ ರಾಜು, ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಶ್ರೀನಿವಾಸ ಸಾಗರ ಜಲಾಶಯಕ್ಕೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ, ಜಲಾಶಯದ ನೀರಿನಲ್ಲಿ ಆಟ ಆಡಲು ನೀರಿನಲ್ಲಿ ಇಳಿದಿದ್ದಾಗ ಈ ದುರ್ಘಟನೆ ನಡೆದಿದೆ.
READ THIS : Hemavati ನದಿಯಲ್ಲಿ ಮೂವರು ಯುವಕರು ಮುಳುಗಿ ಸಾವು..!!

ತಂದೆ, ಮಗಳು ಪ್ರಣಾಪಾಯದಿಂದ ಪಾರು
ರೇಖಾ ಹಾಗೂ ಹೇಮಂತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ರಾಜು ಹಾಗೂ ದೀಪಾ ಸಹ ನೀರು ಕುಡಿದಿದ್ದು, ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
CHIKKABALLAPURA ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ ಹಾಗೂ ಮಗನ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. CHIKKABALLAPURA ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

MUST WATCH : ಚಿನ್ನ ಗೆದ್ದು ತವರಿಗೆ ಮರಳಿದ ಚಿನ್ನದ ಹುಡುಗಿ – ಏರ್ಪೋರ್ಟ್ನಲ್ಲಿ ಪೂವಮ್ಮಗೆ ಅದ್ಧೂರಿ ಸ್ವಾಗತ




