ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಭೀಕರ ACCIDENT – ಡಿವೈಡರ್ಗೆ ಕಾರು ಡಿಕ್ಕಿಯಾಗಿ ಎರಡು ವರ್ಷದ ಕಂದಮ್ಮ ಸಾವು

ರಾತ್ರಿ ಸುರಿದ ಭಾರೀ ಮಳೆಯಿಂಧಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಎರಡು ವರ್ಷದ ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಐವರು ಗಾಯಗೊಂಡಿರುವ ಘಟನೆ ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆಯ ಚಿನ್ನಸಂದ್ರ ಗ್ರಾಮದ ಬಳಿ ನಡೆದಿದೆ.
READ THIS : ಕಾರಿನಲ್ಲೇ ಕ್ಯಾಬ್ ಚಾಲಕ ಅನುಮಾನಾಸ್ಪದ ಸಾವು! ಆಗಿದ್ದೇನು?

ಎರಡು ವರ್ಷದ ಕಂದಮ್ಮ ಸಾವು
ಕಾರು ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಚಿನ್ನಸಂದ್ರ ಗ್ರಾಮದ ಹೋಟೆಲ್ ಒಂದರ ಬಳಿ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಈ ಅಪಘಾತದಲ್ಲಿ ಎರಡು ವರ್ಷದ ಕಂದಮ್ಮ ರಶದಾನ್ ಆಲಿ ಸ್ಥಳದಲ್ಲೇ ಮೃತಪಟ್ಟಿದ್ದು. ಕಾರಿನಲ್ಲಿದ್ದ ಸಫಿನಬಾನು, ಚಾಲಕ ಮೊಹಮ್ಮದ್ ಶರೀಫ್, ನಸರೀನ್ ತಾಜ್, ಹೈದರ್ ಶರೀಫ್ ಮತ್ತು ಶಾಹಿನ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಗಾಯಾಳುಗಳನ್ನ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ACCIDENT – ಮಿನುಗುವ ದೀಪ ಅಳವಡಿಸಬೇಕೆಂದು ಆಗ್ರಹ
ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಇ ನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ರಾತ್ರಿ ವೇಳೆ ಡಿವೈಡರ್ಗಳು ಕಾಣಿಸದೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಇಂತಹ ದುರಂತಗಳನ್ನು ತಡೆಗಟ್ಟಲು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮಿನುಗುವ ದೀಪಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

MUST WATCH : ಮುಂದೆ ಕಾಂಗ್ರೆಸ್ಗೆ ಗೋವಿಂದ ಗ್ಯಾರಂಟಿ ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವ್ಯಂಗ್ಯ




