
Accident | ತಾತ ಅಜ್ಜಿ ಮಡಿಲಲ್ಲಿ ಬೆಳೆಯುತ್ತಿದ್ದ ಬಾಲಕಿ ಟ್ರ್ಯಾಕ್ಟರ್ಗೆ ಬಲಿ – ತಾಯಿಯ ವರ್ಷದ ಕಾರ್ಯ ಮುಗಿಸಿದ ಮರುದಿನವೇ ಘೋರ ದುರಂತ.!
ಆಟವಾಡುತ್ತಾ ತಾತ, ಅಜ್ಜಿ ಮಡಿಲಲ್ಲಿ ಬೆಳೆಯಬೇಕಿದ್ದ ನಾಲ್ಕು ವರ್ಷದ ಪುಟ್ಟ ಕಂದಮ್ಮ ರಕ್ಕಸ ಟ್ರ್ಯಾಕ್ಟರ್ಗೆ ಬಲಿಯಾಗಿರೋ ಮನಕಲಕುವ ಘಟನೆ ಗೌರಿಬಿದನೂರು ನಗರದ ಬೆಂಗಳೂರು ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಮುಂಭಾಗ ನಡೆದಿದೆ. ಗುಂಡಮಗೆರೆ ಮೂಲದ ನಾಲ್ಕು ವರ್ಷದ ವೇದ ಮೃತ ದುರ್ದೈವಿ.

ತಾಯಿಯ ವರ್ಷದ ಕಾರ್ಯ ಮುಗಿಸಿದ ಮರುದಿನವೇ ಘೋರ ದುರಂತ.!
ಇನ್ನು ಅಜ್ಜಿ ಗಂಗಮ್ಮ ಹಾಗೂ ತಾತ ತಿಮ್ಮಪ್ಪ, ವೇದಳನ್ನ ಎಕ್ಸೆಲ್ ಬೈಕ್ನಲ್ಲಿ ಕೂರಿಸಿಕೊಂಡು ಗೌರಿಬಿದನೂರು ಕಡೆಗೆ ಬರ್ತಿದ್ದರು. ಈ ವೇಳೆ ಸೀಟ್ಸ್ ಕಂಪನಿಗೆ ಸೇರಿದೆ ಎನ್ನಲಾದ ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೇದಳ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಮಗುವನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾಳೆ. Accident ನಲ್ಲಿ ಅಜ್ಜಿ-ತಾತನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
READ THIS : ತುಮಕೂರಿನಲ್ಲಿ ಹಿಟ್ & ರನ್ಗೆ ನವದಂಪತಿ ಬಲಿ!

ವರ್ಷದ ಹಿಂದಷ್ಟೇ ಅನಾರೋಗ್ಯದಿಂದ ಮೃತಪಟ್ಟಿದ್ದ ಬಾಲಕಿ ತಾಯಿ
ಇನ್ನು ವೇದ ಕುಟುಂಬದ ಕಣ್ಣೀರ ಕಥೆ ಕೇಳಿದ್ರೆ ಎಂಥವರ ಕಣ್ಣಲ್ಲೂ ನೀರು ಬರುವಂತಿದೆ. ವೇದ ತಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಇನ್ನು ಆಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ವೇದ ತಾಯಿ ಚೈತ್ರಾ, ಕಳೆದ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ನಿನ್ನೆಯಷ್ಟೇ ತಾಯಿಯ ವರ್ಷದ ಕಾರ್ಯ ಮುಗಿಸಿದ್ದ ಕುಟುಂಬ, ಇಂದು ಮುದ್ದು ಮೊಮ್ಮಗಳ ಅಂತ್ಯಕ್ರಿಯೆ ಮಾಡೋ ಪರಿಸ್ಥಿತಿ ಬಂದಿದೆ.
ದಿನೇ ದಿನೇ ಹೆಚ್ಚಾಗ್ತಿರುವ Acciddent
ಇನ್ನು ಗೌರಿಬಿದನೂರು ನಗರದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇರೋದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಪ್ರಮುಖ ರಸ್ತೆಗಳಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಿ, ಸಂಚಾರ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಹಾಗೂ ಅಪಘಾತ ತಡೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.

MUST WATCH : ತುಮಕೂರಲ್ಲಿ MODI ಹುಟ್ಟುಹಬ್ಬ ಆಚರಣೆ – ಪೊರಕೆ ಹಿಡಿದು ಕಸ ಗುಡಿಸಿದ V.SOMANNA




