ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ Accident – ಬೈಕ್ನಲ್ಲಿದ್ದ ಮೂವರು ಯುವಕರಿಗೆ ಗಂಭೀರ ಗಾಯ.!

ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ Accident ಸಂಭವಿಸಿದೆ. ಇನ್ನು ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕಿನಲ್ಲಿದ್ದ ಮೂವರು ಯುವಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಮಾರುತಿನಗರದ ಬಳಿ ನಡೆದಿದೆ.
READ THIS : 2 ಬೈಕ್ ಗಳ ನಡುವೆ ಡೆಡ್ಲಿ ಆಕ್ಸಿಡೆಂಟ್ ಭೀಕರ ಅಪಘಾತದಲ್ಲಿ ಮೂವರ ಸಾವು

ಮೂವರು ಯುವಕರಿಗೆ ಗಂಭೀರ ಗಾಯ.!
ಇನ್ನು ಯುವಕರು ಚಿಂತಾಮಣಿಯಿಂದ ಬುರಮಾಕಲಹಳ್ಳಿಯ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಇನ್ನು ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕಿನಲ್ಲಿದ್ದ ನಾಗಸಂದ್ರಗಡ್ಡೆ ನಿವಾಸಿ ವಿಜಯ್, ವರುಣ್ ಹಾಗೂ ವಿಷ್ಣು ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಮೂವರು ಯುವಕರ ಕೈ-ಕಾಲುಗಳ ಮೂಳೆ ಮುರಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Accident – ಪೊಲೀಸರು ಭೇಟಿ,ಪರಿಶೀಲನನೆ
ಇನ್ನು ಅಪಘಾತದಲ್ಲಿ ಗಾಯಗೊಂಡ ಮೂವರಿಗೂ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ವಿಷಯ ತಿಳಿಯುತ್ತಿದ್ದಂತೆಯೇ ಚಿಂತಾಮಣಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಶಿವರಾಜ್ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

MUST WATCH : DC ಕಚೇರಿ ಮುತ್ತಿಗೆಗೆ ಬಿಜೆಪಿಗರ ಯತ್ನ – ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಖಾಕಿ.!




