
ಕೊಲೆ ಕೇಸ್ ನಲ್ಲಿ ನಟ Darshan ಗೆ ಇಂದು ಬಿಗ್ ಡೇ : ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ (ಅಪ್ರೂವರ್) ಅರ್ಜಿಯ ತೀರ್ಪನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ಇಂದು ಪ್ರಕಟಿಸುವ ಸಾಧ್ಯತೆಯಿದೆ.
ಮಾಫಿ ಸಾಕ್ಷಿಯನ್ನಾಗಿ ಮಾಡಬೇಕೇ ಅಥವಾ ಬೇಡವೇ
ಪ್ರಕರಣದ ತನಿಖೆ ಮತ್ತು ವಿಚಾರಣೆ ನಿರ್ಣಾಯಕ ಹಂತ ತಲುಪಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಮಹತ್ವ ಪಡೆದಿದೆ. ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಬೇಕೇ ಅಥವಾ ಬೇಡವೇ ಎಂಬ ಕುರಿತು ನ್ಯಾಯಾಲಯದ ತೀರ್ಪಿನ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳು ಅವಲಂಬಿತವಾಗಿವೆ.

ಜೈಲು ನಡವಳಿಕೆ ವರದಿ ಪರಿಶೀಲನೆ
ಆಗಸ್ಟ್ 20ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯವು ಪ್ರದೋಷ್ ಅವರ ಜೈಲು ನಡವಳಿಕೆಯ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಲಾಗಿತ್ತು.
ಅದರಂತೆ ಜೈಲಾಧಿಕಾರಿಗಳು ಇಂದು ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಂಬ್ರಾಣಿ ಅವರ ಪೀಠಕ್ಕೆ ಪ್ರದೋಷ್ ಅವರ ನಡವಳಿಕೆ ಕುರಿತ ವರದಿಯನ್ನು ಸಲ್ಲಿಸಿದ್ದಾರೆ. ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯ ಕುರಿತು ಅಂತಿಮ ಆದೇಶ ನೀಡಲಿದೆ.
READ THIS : ಆರೋಪಿ Darshan ಗೆ ಎದುರಾಯ್ತು ಮಾಫಿ ಸಾಕ್ಷಿ ಭೀತಿ!

ಮಾಫಿ ಸಾಕ್ಷಿಯಾದರೆ ಮುಂದೇನು?
ನ್ಯಾಯಾಲಯವು ಪ್ರದೋಷ್ ಅವರ ಅರ್ಜಿಯನ್ನು ಅಂಗೀಕರಿಸಿದರೆ, ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಮುಂದಿನ ಕಾನೂನು ಪ್ರಕ್ರಿಯೆಗಳು ಆರಂಭವಾಗಲಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯಲಿದೆ.
ಪ್ರಾಸಿಕ್ಯೂಷನ್ ದೃಷ್ಟಿಯಿಂದ ಮಾಫಿ ಸಾಕ್ಷಿಯ ಹೇಳಿಕೆ ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ. ಪ್ರಕರಣದ ಇತರ ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಈ ಹೇಳಿಕೆಯನ್ನು ಸಾಕ್ಷ್ಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯಬಹುದು.

ಮತ್ತಷ್ಟು ಆರೋಪಿಗಳು ಅಪ್ರೂವರ್ ಆಗುವ ಸಾಧ್ಯತೆ?
ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಅವರ ಪೈಕಿ ಮತ್ತಿಬ್ಬರು ಆರೋಪಿಗಳೂ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆದಿದೆ.
ಆದರೆ ಒಬ್ಬ ಆರೋಪಿಗೆ ಮಾತ್ರ ಕ್ಷಮಾದಾನ ನೀಡಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ವಿಚಾರದಲ್ಲಿ ನ್ಯಾಯಾಲಯದ ನಿರ್ಧಾರ ಮಹತ್ವದ್ದಾಗಿದೆ.
MUST WATCH : ಎಗ್ಗಿಲ್ಲದೇ ನಡೀತಿದೆ ಮಟ್ಕಾ-ಇಸ್ಪೀಟು ದಂಧೆ – ಪೊಲೀಸರ ವಿರುದ್ಧವೇ ಮಾಜಿ ಸಿಎಂ ಆರೋಪ.!





