Renukaswamy ಕೊಲೆ ಪ್ರಕರಣ: ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶ ಆ.24ಕ್ಕೆ ಮುಂದೂಡಿಕೆ

Renukaswamy ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಪ್ರದೋಷ್, ತನ್ನನ್ನು ಮಾಫಿ ಸಾಕ್ಷಿ (ಅಪ್ರೂವರ್)ಯಾಗಿ ಪರಿಗಣಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಾಲಯ ಆಗಸ್ಟ್ 24ಕ್ಕೆ ಕಾಯ್ದಿರಿಸಿದೆ.

ಪ್ರದೂಷ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕುರಿತು ನ್ಯಾಯಾಲಯಕ್ಕೆ ತನಿಖಾಧಿಕಾರಿಯಾಗಿರುವ ಕಾಮಾಕ್ಷಿಪಾಳ್ಯ ಎಸಿಪಿ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೊರತುಪಡಿಸಿ ಪ್ರದೋಷ್ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಜೈಲಿನಲ್ಲಿರುವಾಗ ಪ್ರದೋಷ್ ಅವರ ನಡವಳಿಕೆ ಮತ್ತು ವರ್ತನೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಈ ವರದಿಯೂ ಅರ್ಜಿಯ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
READ THIS : ಪ್ರದೂಷ್ ಇಮೇಲ್ ಮೂಲಕ ಮಾಫಿ ಸಾಕ್ಷಿ ಅರ್ಜಿ ಕಳುಹಿಸಲು ಕೋರ್ಟ್ ಸೂಚನೆ

ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಸಿದ್ಧ
ಪ್ರಕರಣದಲ್ಲಿ ಪ್ರದೋಷ್ ಮಾತ್ರವಲ್ಲದೆ ಮತ್ತೊಬ್ಬ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಸಿದ್ಧನಿರುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಪ್ರಕರಣದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ದರ್ಶನ್ ಗ್ಯಾಂಗ್ನ ಒಳಗಿನ ರಹಸ್ಯಗಳು ಹಾಗೂ ಕೊಲೆಯ ನಡೆದ ಹಂತಗಳ ಸಂಪೂರ್ಣ ವಿವರಗಳನ್ನು ಕೋರ್ಟ್ ಮುಂಭಾಗ ಬಿಚ್ಚಿಡಲು ಈ ಇಬ್ಬರು ಆರೋಪಿಗಳು ಮುಂದಾಗಿರುವುದು ಇಡೀ ಪ್ರಕರಣದ ರೂಪುರೇಷೆಯನ್ನೇ ಬದಲಿಸುವ ನಿರೀಕ್ಷೆಯಿದೆ.

MUST WATCH : ನವವಧು ಸಾ* ಪ್ರಕರಣಕ್ಕೆ ಟ್ವಿಸ್ಟ್ – ಅತ್ಯಾಚಾರವೆಸಗಿ ಯುವತಿ ಕೊ*!




