
BBK 13 : ಬಿಗ್ ಬಾಸ್ ಮನೆಯಿಂದ ಲಿಖಿತ್ ಔಟ್ – ಮಂಜ ಭಾವುಕ
ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಎಲಿಮಿನೇಷನ್ ನಡೆದಿದೆ. ‘ಅಗ್ನಿಪರೀಕ್ಷೆ’ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದ ಲಿಖಿತ್ ಗೊಂದಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಆತ್ಮೀಯ ಗೆಳೆಯ ಲಿಖಿತ್ ಎಲಿಮಿನೇಟ್ ಆಗಿದ್ದರಿಂದ ಮಾಡರ್ನ್ ಮಹಾಕವಿ ಮಂಜ ಭಾವುಕರಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಲಿಖಿತ್ ಔಟ್!
ಈ ವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳ ಪೈಕಿ ಯಶಸ್, ಮಂಜ ಹಾಗೂ ಧನುಷ್ ಸೇವ್ ಆಗಿದ್ದರು. ಬಳಿಕ ಸಂಗೀತಾ, ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಅವರು ಹಾಟ್ ಸೀಟ್ನಲ್ಲಿ ಉಳಿದಿದ್ದರು. ಇವರಲ್ಲಿ ಲಿಖಿತ್ ಗೊಂದಿ ಮನೆಯಿಂದ ಹೊರಹೋಗುವುದು ಅಂತಿಮವಾಯಿತು.
READ THIS : ಬಿಗ್ ಬಾಸ್ ಮನೆಯಲ್ಲಿ ಲಿಖಿತ್-ಮಂಜ ವಿರುದ್ಧ ಆಸಿಯಾ ಗರಂ!

BBK 13 – ಗೆಳೆಯನನ್ನು ಕಳೆದುಕೊಂಡ ಬೇಸರ
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಲಿಖಿತ್ ಮತ್ತು ಮಂಜ ಆತ್ಮೀಯ ಸ್ನೇಹಿತರಾಗಿದ್ರು. ಹೀಗಾಗಿ ಲಿಖಿತ್ ಎಲಿಮಿನೇಟ್ ಆಗುತ್ತಿದ್ದಂತೆ ಮಂಜ ಬೇಸರಗೊಂಡರು. ‘ನಗು ನಗುತ್ತಲೇ ಬಂದು ನಗುತ್ತಲೇ ಹೋದ..’ ಎಂದು ಹೇಳಿಕೊಂಡು ತಮ್ಮ ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ.
ಲಿಖಿತ್ ಮತ್ತೆ ಬರುತ್ತಾರೆ ಎಂದುಕೊಂಡಿದ್ದ ಮಂಜ, ಇಬ್ಬರೂ ಸೇರಿ ಚಿಕನ್ ತಿನ್ನಬೇಕು ಎಂದುಕೊಂಡಿದ್ದರಂತೆ. ಆದರೆ ಲಿಖಿತ್ ಎಲಿಮಿನೇಷನ್ ಆಗಿದ್ದರಿಂದ ಅವರ ಆಸೆ ಈಡೇರದೆ ನಿರಾಸೆಯಾಯಿತು. ಮನೆಮಂದಿ ಮಂಜನನ್ನು ಸಮಾಧಾನ ಮಾಡಿದರು.

MUST WATCH : ತುಮಕೂರಿನಲ್ಲಿ ಚಿಪ್ಪು ಹಂದಿ ಪತ್ತೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ




