MURDER : ಸಿಲಿಕಾನ್ ಸಿಟಿಯಲ್ಲಿ ಜಿಮ್ ಟ್ರೈನರ್ ನಿಗೂಢ ಸಾವು.! – ದೇಹದ ಮೇಲೆ ಗಾಯದ ಗುರುತು.. ಸ್ನೇಹಿತರ ಮೇಲೆ ಅನುಮಾನ

ಜಿಮ್ನ ಮೊದಲ ವರ್ಷದ ಆ್ಯನಿವರ್ಸರಿ ಮುಗಿಸಿ ಅಪಾರ್ಟ್ಮೆಂಟ್ಗೆ ತೆರಳಿದ್ದ ಜಿಮ್ ಟ್ರೈನರ್ವೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸ್ನೇಹಿತರೇ ಹಲ್ಲೆ ನಡೆಸಿ MURDER ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಕೆಂಪಾಪುರದಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ನಂದನ್ ಮೃತ ಜಿಮ್ ಟ್ರೈನರ್.
ನಂದನ್ ಮೇಲೆ ಮಾರಣಾಂತಿಕ ಹಲ್ಲೆ
ಕಳೆದ ಶನಿವಾರ ಜಿಮ್ನ ಮೊದಲ ವರ್ಷದ ಆ್ಯನಿವರ್ಸರಿ ಕಾರ್ಯಕ್ರಮ, ಮುಗಿಸಿಕೊಂಡು ನಂದನ್ ಪರಿಚಿತರ ಅಪಾರ್ಟ್ಮೆಂಟ್ಗೆ ತೆರಳಿದ್ದಾನೆ. ಈ ವೇಳೆ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದಿದ್ದು, ನಂದನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ನಂದನ್ನನ್ನ ಹೆಬ್ಬಾಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಂದನ್ ಸಾವನ್ನಪ್ಪಿದ್ದಾನೆ.
READ THIS : ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್ನಿಂದ ಅಟ್ಯಾಕ್ – ರೌಡಿಶೀಟರ್ ಬರ್ಬರ MURDER

ನಾಲ್ವರ ವಿರುದ್ಧ FIR
ಇನ್ನು ಮಗನ ಸಾವಿನ ವಿಚಾರ ತಿಳಿದು ಆಸ್ಪತ್ರೆಗೆ ತೆರಳಿದ್ದ ತಾಯಿ ಮಂಜುಳಾ, ನಂದನ್ ದೇಹದ ಮೇಲೆ ಗಾಯದ ಗುರುತುಗಳನ್ನ ಗಮನಿಸಿ, ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಅಮೃತಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಸದ್ಯ ನಂದನ್ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ನಂದನ್ ಸಾವಿಗೆ ನಿಜಕ್ಕೂ ಏನು ಕಾರಣ?
ಒಟ್ನಲ್ಲಿ ಜಿಮ್ ಆ್ಯನಿವರ್ಸರಿ ಮುಗಿಸಿ ಅಪಾರ್ಟ್ಮೆಂಟ್ಗೆ ತೆರಳಿದ್ದ ಯುವಕನ ಸಾವು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ನಂದನ್ ಸಾವಿಗೆ ನಿಜಕ್ಕೂ ಏನು ಕಾರಣ..? ಅಪಾರ್ಟ್ಮೆಂಟ್ನಲ್ಲಿ ನಡೆದ ಗಲಾಟೆಯೇ ಸಾವಿಗೆ ಕಾರಣವಾಯ್ತಾ ಅನ್ನೋದ್ರ ಬಗ್ಗೆ ಪೊಲೀಸರ ತನಿಖೆಯಿಂಧಷ್ಟೇ ಹೊರಬರಬೇಕಿದೆ.

MUST WATCH : ತುಮಕೂರಿನಲ್ಲಿ ಚಿಪ್ಪು ಹಂದಿ ಪತ್ತೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ




