Bengaluru | ರೇಣುಕಾಸ್ವಾಮಿ ಕೊಲೆ ಕೇಸ್ : ಪ್ರದೋಷ್ ಗೆ ಇಮೇಲ್ ಮೂಲಕ ಮಾಫಿ ಸಾಕ್ಷಿ ಅರ್ಜಿ ಕಳುಹಿಸಲು ಕೋರ್ಟ್ ಸೂಚನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ (A14) ಪ್ರದೂಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಕುರಿತ ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ CCH ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆ ವೇಳೆ, ಈ ಹಿಂದೆ ಇಮೇಲ್ ಮೂಲಕ ಕಳುಹಿಸಲಾಗಿದ್ದ ಮಾಫಿ ಸಾಕ್ಷಿ ಅರ್ಜಿಯ ಪ್ರತಿ ತನಗೆ ತಲುಪಿಲ್ಲ ಎಂದು ಪ್ರದೋಷ್ ನ್ಯಾಯಾಲಯದ ಮುಂದೆ ತಿಳಿಸಿದರು.
ಮಾಫಿ ಸಾಕ್ಷಿ ಅರ್ಜಿ ತಲುಪಿದೆಯೇ?
ವಿಚಾರಣೆ ಆರಂಭವಾಗುತ್ತಿದ್ದಂತೆ, “ನಿನ್ನೆ ಸಂಜೆ ಇಮೇಲ್ ಮೂಲಕ ಕಳುಹಿಸಲಾಗಿದ್ದ ಮಾಫಿ ಸಾಕ್ಷಿ ಅರ್ಜಿ ತಲುಪಿದೆಯೇ?” ಎಂದು ನ್ಯಾಯಾಲಯವು ಪ್ರದೋಷ್ನನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಪ್ರದೋಷ್, ಅರ್ಜಿಯ ಯಾವುದೇ ಪ್ರತಿ ತನ್ನ ಕೈ ಸೇರಿಲ್ಲ ಎಂದು ಸ್ಪಷ್ಟಪಡಿಸಿದನು.
READ THIS : ಪ್ರದೂಷ್ ಮಾಫಿ ಕೇಸ್ – ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ಅರ್ಜಿಯನ್ನು ಸಂಪೂರ್ಣವಾಗಿ ಓದಿ ಪರಿಶೀಲಿಸಲು ಅಗತ್ಯ ಕಾಲಾವಕಾಶ
ಆರೋಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ತಕ್ಷಣವೇ ಅರ್ಜಿಯ ಪ್ರತಿಯನ್ನು ಪ್ರದೋಷ್ಗೆ ತಲುಪಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತು. ಅಲ್ಲದೆ, ಅರ್ಜಿಯನ್ನು ಸಂಪೂರ್ಣವಾಗಿ ಓದಿ ಪರಿಶೀಲಿಸಲು ಆರೋಪಿಗೆ ಅಗತ್ಯ ಕಾಲಾವಕಾಶ ನೀಡಬೇಕು.
ಪ್ರದೋಷ್ ಅರ್ಜಿಯನ್ನು ಪರಿಶೀಲಿಸಿದ ಬಳಿಕ ಅವರಿಂದ ಸಹಿ ಪಡೆಯಬೇಕು. ನಂತರ ಜೈಲು ಅಧಿಕಾರಿಗಳ ಅಧಿಕೃತ ಮುದ್ರೆ (ಸೀಲ್) ಪಡೆದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಜೈಲು ಆಡಳಿತಕ್ಕೆ ನಿರ್ದೇಶಿಸಿದರು.

Bengaluru – ವಿಚಾರಣೆಯನ್ನು ಮಧ್ಯಾಹ್ನ 3:30ಕ್ಕೆ ಮುಂದೂಡಿಕೆ
ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಮಯ ಅಗತ್ಯವಿರುವುದರಿಂದ, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಧ್ಯಾಹ್ನ 3:30ಕ್ಕೆ ಮುಂದೂಡಿತು.
MUST WATCH : ತಿಪಟೂರಲ್ಲಿ ಬಡವರಿಗೆ ಸೌಲಭ್ಯಗಳ ಹಬ್ಬ – ಷಡಕ್ಷರಿಯಿಂದ ವಿವಿಧ ಸವಲತ್ತು ವಿತರಣೆ




