ಕರ್ನಾಟಕದಲ್ಲಿ SIR ಮುಕ್ತಾಯ: 1.07 ಕೋಟಿಗೂ ಹೆಚ್ಚು ಮತದಾರರು ಔಟ್, ಬೆಂಗಳೂರಲ್ಲೇ 46.88 ಲಕ್ಷ ಜನ ಪಟ್ಟಿಯಿಂದ ಹೊರಗೆ

ರಾಜ್ಯದಲ್ಲಿ ಜೂನ್ 30ರಿಂದ ಆಗಸ್ಟ್ 17ರವರೆಗೆ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಪೂರ್ಣಗೊಂಡಿದ್ದು, ಬರೋಬ್ಬರಿ 1,07,96,415 ಮತದಾರರನ್ನು ಎಎಸ್ಡಿಡಿಒ (ನಾಪತ್ತೆ, ಶಾಶ್ವತ ಸ್ಥಳಾಂತರ, ಮೃತ, ನಕಲಿ ಹಾಗೂ ಇತರೆ) ವರ್ಗಕ್ಕೆ ಸೇರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಮತದಾರರ ಪಟ್ಟಿಯಿಂದ ಯಾರನ್ನು ಕೈ ಬಿಡಲಾಗಿದೆ?
ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಶೇ.19.48ರಷ್ಟು ಮಂದಿಯನ್ನು ಎಎಸ್ಡಿಡಿಒ ವಿಭಾಗದಲ್ಲಿ ಗುರುತಿಸಲಾಗಿದೆ. ಜೂನ್ 30ರಿಂದ ಆಗಸ್ಟ್ 17ರವರೆಗೆ ಅಧಿಕಾರಿಗಳು ಮನೆ-ಮನೆಗೆ ತೆರಳಿ ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಪರಿಶೀಲನೆಯ ಸಂದರ್ಭದಲ್ಲಿ ಎನ್ಯೂಮರೇಷನ್ ಫಾರ್ಮ್ಗಳಿಗೆ ಸಹಿ ಮಾಡಿ ಸಲ್ಲಿಸದವರು ಸೇರಿದಂತೆ ಎಎಸ್ಡಿಡಿಒ ವರ್ಗದಲ್ಲಿ ಗುರುತಿಸಲ್ಪಟ್ಟಿರುವ ಮತದಾರರ ಹೆಸರುಗಳನ್ನು ಮುಂಬರುವ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಶಾಶ್ವತ ಸ್ಥಳಾಂತರಗೊಂಡವರೇ ಹೆಚ್ಚು
ಎಎಸ್ಡಿಡಿಒ ವರ್ಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು ಕಂಡುಬಂದಿದ್ದಾರೆ. ಇವರ ಸಂಖ್ಯೆ 65,45,721 ಆಗಿದ್ದು, ರಾಜ್ಯದ ಒಟ್ಟು ಮತದಾರರ ಶೇ.11.81ರಷ್ಟಾಗಿದೆ.
ಇನ್ನು 16,39,871 ಮಂದಿ ಮೃತಪಟ್ಟವರು, 15,17,056 ಮಂದಿ ಪತ್ತೆಯಾಗದವರು ಅಥವಾ ಗೈರಾದವರು ಎಂದು ಗುರುತಿಸಲಾಗಿದೆ. 7,09,875 ಮಂದಿ ನಕಲಿ ಅಥವಾ ಈಗಾಗಲೇ ನೋಂದಾಯಿತ ಮತದಾರರು ಎಂದು ಪತ್ತೆಯಾಗಿದ್ದು, 3,83,892 ಮಂದಿ ಫಾರ್ಮ್ಗೆ ಸಹಿ ಮಾಡಲು ಇಚ್ಛಿಸದವರು ಎಂದು ವರ್ಗೀಕರಿಸಲಾಗಿದೆ.
READ THIS : SIR ಕರ್ತವ್ಯ ನಿರ್ವಹಣೆ ವೇಳೆ BLO ಹೃದಯಾಘಾತದಿಂದ ದಾರುಣ ಸಾವು

ಬೆಂಗಳೂರಿನಲ್ಲಿ ಗರಿಷ್ಠ ಪ್ರಮಾಣ
ರಾಜ್ಯದಲ್ಲಿ ಗುರುತಿಸಲಾದ ಒಟ್ಟು ಎಎಸ್ಡಿಡಿಒ ಮತದಾರರ ಪೈಕಿ ಸುಮಾರು ಶೇ.46.88ರಷ್ಟು ಮಂದಿ ಬೆಂಗಳೂರಿನ ವ್ಯಾಪ್ತಿಯಲ್ಲೇ ಇದ್ದಾರೆ.
- ಬಿಬಿಎಂಪಿ ದಕ್ಷಿಣ: 10,58,054 — ಶೇ.49.33
- ಬಿಬಿಎಂಪಿ ಕೇಂದ್ರ: 8,60,729 — ಶೇ.45.54
- ಬಿಬಿಎಂಪಿ ಉತ್ತರ: 10,52,536 — ಶೇ.45.12
- ಬೆಂಗಳೂರು ನಗರ: 17,17,445 — ಶೇ.42.71
ಇವುಗಳಲ್ಲಿ ಬಿಬಿಎಂಪಿ ದಕ್ಷಿಣ ವ್ಯಾಪ್ತಿಯಲ್ಲಿ ಎಎಸ್ಡಿಡಿಒ ವರ್ಗದ ಮತದಾರರ ಪ್ರಮಾಣ ರಾಜ್ಯದಲ್ಲೇ ಅತ್ಯಧಿಕವಾಗಿದೆ.

ಆಗಸ್ಟ್ 24ರಂದು ಕರಡು ಪಟ್ಟಿ ಪ್ರಕಟ
ಆಗಸ್ಟ್ 17ಕ್ಕೆ ಮನೆ-ಮನೆ ಪರಿಶೀಲನಾ ಕಾರ್ಯ ಸಂಪೂರ್ಣಗೊಂಡಿದ್ದು, ಪರಿಷ್ಕೃತ ಎಎಸ್ಡಿಡಿಒ ಡೇಟಾವನ್ನು ಆಧರಿಸಿ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ
MUST WATCH : ಎದುರುಮನೆ ಯುವಕನಿಂದ ಕಾಟ – ಬೇಸತ್ತ ವಿದ್ಯಾರ್ಥಿನಿ ಆತ್ಮಹ* ಗೆ ಶರಣು





