SIR ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ BLO ಗೆ ‘ಹೃದಯಾಘಾತ’ : ಆಸ್ಪತ್ರೆಯಲ್ಲಿ ಸ್ಟಂಟ್ ಅಳವಡಿಕೆ ವೇಳೆ ಸಾವು!

SIR ಪ್ರಕ್ರಿಯೆ ಸಂದರ್ಭದಲ್ಲಿ ನಿನ್ನೆ ತುಮಕೂರಿನಲ್ಲಿ ಅಪಘಾತದಿಂದ ವಿಎ ಭುವನಾ ಸಾವನಪ್ಪಿದ್ದರು. ಅದಾದ ಬಳಿಕ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬಿಎಲ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೃದಯಾಘಾತಕ್ಕೆ ಮತ್ತೊಬ್ಬ ಅಧಿಕಾರಿ ಸಾವು
ಇದೀಗ ಇಂತಹದ್ದೇ ಘಟನೆಯೊಂದು ಬೀದರ್ನಲ್ಲಿ ನಡೆದಿದೆ. ಹೌದು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 40 ವರ್ಷದ ಬೂತ್ ಮಟ್ಟದ ಅಧಿಕಾರಿ (BLO) ಸುನೀಲ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೀದರ್ ನಗರದ ಅಮಲಾಪುರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ವೇಳೆ ಸುನೀಲ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ಇದನ್ನು ಓದಿ : ಶಾಲೆಯಲ್ಲೇ ಹೃದಯಾಘಾತದಿಂದ 29 ವರ್ಷದ ಶಿಕ್ಷಕ ದುರ್ಮರಣ..!!

ಆಸ್ಪತ್ರೆಯಲ್ಲಿ ಸ್ಟಂಟ್ ಅಳವಡಿಕೆ ವೇಳೆ ಸಾವು!
ತಕ್ಷಣ ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ವೈದ್ಯರು ಸ್ಟೆಂಟ್ ಅಳವಡಿಸಲು ಮುಂದಾದಾಗ ತೀವ್ರ ಹೃದಯಘಾತದಿಂದ ಸುನೀಲ್ ಮೃತಪಟ್ಟಿದ್ದಾರೆ. ಮೃತ ಸುನೀಲ್ ಅವರು ಭಾಲ್ಕಿ ತಾಲ್ಲೂಕಿನ ನಿವಾಸಿಯಾಗಿದ್ದು,ಬೀದರ್ ನಲ್ಲಿ ಸರ್ವೆ ಕಾರ್ಯ ಮಾಡುತ್ತಿದ್ದರು. ಇನ್ನು ಈ ಘಟನೆ ಗಾಂಧಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನು ನೋಡಿ : ಸರ್ಕಾರ ಕಾನೂನಿನ ಬಗ್ಗೆ ಚರ್ಚೆ ಮಾಡುವವರು ವ್ಯಾಪಾರಿಗಳ ಬದುಕಿನ ಬಗ್ಗೆ ಯಾಕೆ ಚರ್ಚಿಸ್ತಿಲ್ಲ




