ACCIDENT : ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಯುವಕರು ಸಾವು

ಬೈಕಿಗೆ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಬಳಿ ನಡೆದಿದೆ. ಮೃತರನ್ನು ಬೀದರ್ ತಾಲೂಕಿನ ಯರನಳ್ಳಿ ಗ್ರಾಮದ ಸಾಯಿಕಿರಣ ಜೀತಪ್ಪ ಜೋಶಿ ಹಾಗೂ ನಾಗೇಶ್ ಮಾಣಿಪ್ಪ ಅಣ್ಣಾ ಎಂದು ಗುರುತಿಸಲಾಗಿದೆ.
READ THIS : ಭೀಕರ ಅಪಘಾತ – ಎರಡು ವರ್ಷದ ಕಂದಮ್ಮ ಸಾವು, ಐವರಿಗೆ ಗಂಭೀರ ಗಾಯ
ಬೈಕ್ ಖರೀದಿಸಿ ಊರಿಗೆ ಮರಳುತ್ತಿದ್ದಾಗ ದುರಂತ
ಇನ್ನು ಯುವಕರು ಬೆಂಗಳೂರಿನಿಂದ ಹಳೆಯ ಬೈಕ್ ಖರೀದಿಸಿ ತಮ್ಮೂರಿಗೆ ಬೈಕಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ACCIDENT ಸಂಭವಿಸಿದೆ. ಇನ್ನು ತೆಲಂಗಾಣದ ಸಂಗಾರೆಡ್ಡಿ ಸಮೀಪ ಬೈಕ್ಗೆ ಲಾರಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲು!
ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಬಳಿ ದೊರೆತ ದಾಖಲೆಗಳ ಆಧಾರದ ಮೇಲೆ ಇಬ್ಬರೂ ಬೀದರ್ ಜಿಲ್ಲೆಯ ಯರನಳ್ಳಿ ಗ್ರಾಮದವರು ಎಂಬುದನ್ನು ಗುರುತಿಸಿದ್ದಾರೆ. ಘಟನೆ ಸಂಬಂಧ ಸಂಗಾರೆಡ್ಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
MUST WATCH : 5 ವರ್ಷಕ್ಕೊಮ್ಮೆ ಕಾಲು ಹಿಡಿತಾರೆ SIR ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ





