Bengaluru : ಸಿನಿ ಪ್ರೇಕ್ಷಕರಿಗೆ ಸರ್ಕಾರ ಶಾಕ್, ಸಿನಿಮಾ ಟಿಕೆಟ್ಗಳ ಮೇಲೆ ಶೇ. 2ರಷ್ಟು ಹೆಚ್ಚುವರಿ ಸೆಸ್ ವಿಧಿಸಲು ಮಹತ್ವದ ನಿರ್ಧಾರ

Bengaluru | ರಾಜ್ಯದ ಸಿನಿಮಾ ಪ್ರೇಕ್ಷಕರಿಗೆ ಇನ್ಮುಂದೆ ಸಿನಿಮಾ ನೋಡುವುದು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಸಿನಿಮಾ ಟಿಕೆಟ್ಗಳ ಮೇಲೆ ಶೇಕಡಾ 2ರಷ್ಟು ಹೆಚ್ಚುವರಿ ಕ್ಷೇಮಾಭಿವೃದ್ಧಿ ಸೆಸ್ ವಿಧಿಸುವ ಕ್ರಮ ಸೆಪ್ಟೆಂಬರ್ 30ರಿಂದ ಜಾರಿಗೆ ಬರಲಿದೆ. ಇದರಿಂದ ಸಿನಿಮಾ ಟಿಕೆಟ್ ಮೇಲಿನ ಹೆಚ್ಚುವರಿ ಹೊರೆ ಪ್ರೇಕ್ಷಕರಿಗೆ ವರ್ಗಾವಣೆಯಾದರೆ ಟಿಕೆಟ್ ದರ ಕೊಂಚ ಹೆಚ್ಚಾಗಲಿದೆ.
ಫಿಲ್ಮ್ ಟಿಕೆಟ್ ಮೇಲೆ ಬೀಳಲಿದೆ 2% ಸೆಸ್
ಹೊಸ ನಿಯಮದ ಪ್ರಕಾರ ಸಿನಿಮಾ ಟಿಕೆಟ್ಗಳ ಮೇಲೆ ಶೇಕಡಾ 2ರಷ್ಟು ಸೆಸ್ ವಿಧಿಸಲಾಗುತ್ತದೆ. ಉದಾಹರಣೆಗೆ 200 ರೂಪಾಯಿ ಟಿಕೆಟ್ಗೆ ಶೇಕಡಾ 2ರ ಲೆಕ್ಕದಲ್ಲಿ 4 ರೂಪಾಯಿ ಸೆಸ್ ಆಗುತ್ತದೆ. ಅದೇ ರೀತಿ 500 ರೂಪಾಯಿ ಟಿಕೆಟ್ಗೆ 10 ರೂಪಾಯಿ ಸೆಸ್ ಆಗಲಿದೆ.
READ THIS : ಟಿಕೆಟ್ ದರ ₹200 ನಿಗದಿ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಲ್ಟಿಪ್ಲೆಕ್ಸ್ ಉದ್ಯಮದ ಪ್ರತಿನಿಧಿಗಳು ಹೇಳಿದ್ದೇನು?
ಆದರೆ ಚಿತ್ರಮಂದಿರಗಳು ಈ ಹೊರೆಯನ್ನು ಪ್ರೇಕ್ಷಕರಿಗೆ ವರ್ಗಾಯಿಸುತ್ತವೆಯೋ ಅಥವಾ ತಾವೇ ಭರಿಸುತ್ತವೆಯೋ ಎಂಬುದು ಆಯಾ ಪ್ರದರ್ಶಕರ ನಿರ್ಧಾರವಾಗಬಹುದು ಎಂದು ಮಲ್ಟಿಪ್ಲೆಕ್ಸ್ ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಕಾಯ್ದೆಯಡಿ ಈ ಸೆಸ್ಗೆ ಅವಕಾಶ ಕಲ್ಪಿಸಲಾಗಿದೆ. ಕಾಯ್ದೆಯ ಪ್ರಕಾರ ಸಿನಿಮಾ ಟಿಕೆಟ್ ಸೇರಿದಂತೆ ನಿಗದಿತ ಆದಾಯಗಳ ಮೇಲೆ ಕನಿಷ್ಠ ಶೇಕಡಾ 1ರಿಂದ ಗರಿಷ್ಠ ಶೇಕಡಾ 2ರವರೆಗೆ ಕ್ಷೇಮಾಭಿವೃದ್ಧಿ ಸೆಸ್ ವಿಧಿಸಲು ಅವಕಾಶವಿದ್ದು, ಸಂಗ್ರಹವಾಗುವ ಹಣವನ್ನು ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳಿಗೆ ಬಳಸುವ ವ್ಯವಸ್ಥೆ ಇದೆ.

ಸೆಪ್ಟೆಂಬರ್ 30ರಿಂದ ಸೆಸ್ ಜಾರಿ
ಇನ್ನು ಈ ಸೆಸ್ ಜಾರಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಕಾಯ್ದೆ ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ ಸೆಸ್ ಸಂಗ್ರಹಿಸಲು ಹೊರಡಿಸಿದ್ದ ಹಿಂದಿನ ಆದೇಶ ಮತ್ತು ಸಂಬಂಧಿತ ಕ್ರಮಗಳನ್ನು ಸೆಪ್ಟೆಂಬರ್ 10ರಂದು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು.
ಬಳಿಕ ಕಾಯ್ದೆಯನ್ನು ಅಧಿಕೃತವಾಗಿ ಜಾರಿಗೆ ತರುವ ಕ್ರಮ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 30ರಿಂದ ಸೆಸ್ ಜಾರಿಯಾಗಲಿದೆ ಎಂದು ವರದಿಯಾಗಿದೆ.
ಟಿಕೆಟ್ ದರ ಎಷ್ಟು ದುಬಾರಿಯಾಗುತ್ತೆ?
ಹೊಸ ನಿಯಮದ ಪ್ರಕಾರ, ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡುವ ಗ್ರಾಹಕರು ಟಿಕೆಟ್ ದರದ ಜೊತೆಗೆ 2% ಸೆಸ್ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, 200 ರೂಪಾಯಿ ಮುಖಬೆಲೆಯ ಟಿಕೆಟ್ಗೆ ಹೆಚ್ಚುವರಿಯಾಗಿ 4 ರೂಪಾಯಿ ಸೆಸ್ ಕಟ್ಟಬೇಕು.
MUST WATCH : SIDDARAMAIAH ಮಾತು ನಡೆದಿದ್ಯೋ ಇಲ್ವೋ ಅದನ್ನ ಅವರನ್ನೇ ಕೇಳ್ಬೇಕು ಎಂದ K.N.RAJANNA





