
ನವರಾತ್ರಿ ಹಬ್ಬಕ್ಕೆ GRUHALAKSHMI ಯರಿಗೆ ಗುಡ್ ನ್ಯೂಸ್: 33ನೇ ಕಂತಿನ ಹಣ ಜಮೆಗೆ ಗ್ರೀನ್ ಸಿಗ್ನಲ್!
ದಸರಾ–ನವರಾತ್ರಿ ಹಬ್ಬದ ಸಂಭ್ರಮದ ನಡುವೆಯೇ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆ ಇದೆ.

33ನೇ ಕಂತಿನ ಹಣ ಜಮೆಗೆ ಗ್ರೀನ್ ಸಿಗ್ನಲ್!
ರಾಜ್ಯದಲ್ಲಿ ಸದ್ಯ GRUHALAKSHMI ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹತೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. ಈ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ 33ನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ತಿಳಿದುಬಂದಿದೆ.
READ THIS : ನಿಮ್ಮ ಊರಿನಲ್ಲೇ 2000 ಗೃಹಲಕ್ಷ್ಮಿ ಹಣಕ್ಕೆ ಹೊಸ ಅರ್ಜಿ ಸಲ್ಲಿಸಬಹುದು!

ಹಬ್ಬದ ವೇಳೆ ಹಣ ತಡೆಯದಂತೆ ಸೂಚನೆ
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದ್ದರೂ, ಈ ಸಂದರ್ಭದಲ್ಲಿ ಅರ್ಹ ಮಹಿಳೆಯರಿಗೆ ತಲುಪಬೇಕಾದ ಹಣವನ್ನು ತಡೆಹಿಡಿಯಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

GRUHALAKSHMI – ಹಬ್ಬಕ್ಕೆ ಅಕೌಂಟ್ಗೆ ಬರಲಿದೆ ಹಣ
ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ 33ನೇ ಕಂತಿನ ಹಣ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ದಸರಾ ಹಬ್ಬದ ವೇಳೆಯಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ನೇರವಾಗಿ ಜಮೆಯಾಗಲಿದೆ.
MUST WATCH : ಮಂಡ್ಯದಲ್ಲಿ ಬಾರಿ ಮಳೆಗೆ ಅವಾಂತರ ಆಸ್ಪತ್ರೆಗೆ ನುಗ್ಗಿದ ನೀರು ರೋಗಿಗಳ ಪರದಾಟ




