ನಿಮ್ಮ ಊರಿನಲ್ಲೇ 2000 Gruhalakshmi ಹಣಕ್ಕೆ ಹೊಸ ಅರ್ಜಿ ಸಲ್ಲಿಸಬಹುದು! ಮಹಿಳೆಯರ ಸಹಾಯಕ್ಕೆ ಬರ್ತಿದ್ದಾರೆ ಇವರು!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಯೋಜನೆಯ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಅನರ್ಹರ ಕೈಗೂ ಹಣ ತಲುಪಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಂದ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ.
ಗೃಹಲಕ್ಷ್ಮಿ ಹೊಸ ಅರ್ಜಿ ಬಗ್ಗೆ ಬಿಗ್ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆಯ ಹಣ ಮೃತ ವ್ಯಕ್ತಿಗಳ ಖಾತೆಗಳಿಗೆ ಹಾಗೂ ಐಟಿ ಮತ್ತು ಜಿಎಸ್ಟಿ ಪಾವತಿದಾರರ ಖಾತೆಗಳಿಗೂ ಜಮೆಯಾಗಿರುವ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಅರ್ಹತಾ ಮಾನದಂಡಗಳನ್ನು ಮರುಪರಿಶೀಲಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಯೋಜನೆಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಸರ್ಕಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಬಳಿಕ ಎಲ್ಲಾ ಫಲಾನುಭವಿಗಳಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಮಹಿಳೆಯರ ಸಹಾಯಕ್ಕೆ ಬರ್ತಿದ್ದಾರೆ ಇವರು!
ಅನಕ್ಷರಸ್ಥರು ಹಾಗೂ ಅರ್ಜಿ ಸಲ್ಲಿಸಲು ತೊಂದರೆ ಅನುಭವಿಸುವ ಮಹಿಳೆಯರಿಗೆ ನೆರವಾಗಲು ಅಂಗನವಾಡಿ ಸಿಬ್ಬಂದಿಯ ಮೊಬೈಲ್ಗಳಲ್ಲಿ ವಿಶೇಷ ಆ್ಯಪ್ ಅಳವಡಿಸಲು ಸರ್ಕಾರ ಮುಂದಾಗಿದೆ.
ಜೊತೆಗೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸೇವಾ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ.
ಇದನ್ನು ಓದಿ : ಹೊಸ ನಿಯಮ – ಸರ್ಕಾರಿ ನೌಕರಿ ಇರುವ ಕುಟುಂಬಕ್ಕೆ ‘ಗೃಹಲಕ್ಷ್ಮಿ’ ಶಾಕ್?
ಬಯೋಮೆಟ್ರಿಕ್ ಹಾಗೂ ಫೇಸ್ ರೆಕಗ್ನಿಷನ್ ಮಾಹಿತಿ
ಹೊಸ ಅರ್ಜಿ ಸ್ವೀಕಾರ ವೇಳೆ ಬಯೋಮೆಟ್ರಿಕ್ ಹಾಗೂ ಫೇಸ್ ರೆಕಗ್ನಿಷನ್ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ. ಜೊತೆಗೆ ಬ್ಯಾಂಕ್ ಖಾತೆ ವಿವರಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಮುಂದಾಗಿದೆ.

‘ಗೃಹಲಕ್ಷ್ಮಿ’ಯಲ್ಲಿ ಭಾರೀ ಅಕ್ರಮ
ಇನ್ನೊಂದೆಡೆ Gruhalakshmi Scheme ನ ಲೋಪದೋಷಗಳ ಕುರಿತು ಸಿಎಜಿ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಫಲಾನುಭವಿಗಳ ಹೆಸರು ಜೋಡಣೆಯಾಗಿರುವ ಅಂಶ ಆಡಿಟ್ ವೇಳೆ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗದ ಪರಿಶೀಲನೆಯಲ್ಲಿ ಸುಮಾರು 19 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಗೆ ಸಂಬಂಧ ಹೊಂದಿರುವ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅನರ್ಹರನ್ನು ಪತ್ತೆಹಚ್ಚಿ ಯೋಜನೆಯನ್ನು ಪಾರದರ್ಶಕಗೊಳಿಸಲು ಸರ್ಕಾರ ಮುಂದಾಗಿದೆ.

ಅನರ್ಹರ ಪತ್ತೆಗೆ ಸರ್ಕಾರ ಮುಂದು
ಸದ್ಯ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 1.30 ಕೋಟಿ ಫಲಾನುಭವಿಗಳಿದ್ದಾರೆ.
ಮುಖ್ಯಮಂತ್ರಿಗಳ ಸಭೆಯಲ್ಲೂ ಸಿಎಜಿ ವರದಿ ಬಗ್ಗೆ ಉಲ್ಲೇಖ ಆಗಿದ್ದು, ಸಿಎಜಿ ವರದಿ ಅಧರಿಸಿ ಅನರ್ಹರ ಪತ್ತೆಗೆ ಸರ್ಕಾರ ಮುಂದಾಗಿದೆ.
ಇದನ್ನು ನೋಡಿ : ಸಿನಿಮಾ ಸ್ಟೈಲಲ್ಲಿ ಅಕ್ರಮ ಮದ್ಯ ಸಾಗಾಟ.. ಗೊಬ್ಬರ ಅಂತೇಳಿ ಪೊಲೀಸರಿಗೆ ಸಿಕ್ಕಿಬಿದ್ರು




