
MYSURU DASARA : ಈ ಬಾರಿ ಧನಂಜಯಗೆ ಅಂಬಾರಿ ಹೊರುವ ಹೊಣೆ!
ವಿಶ್ವವಿಖ್ಯಾತ ಮೈಸೂರು ದಸರಾ (MYSURU DASARA) ಜಂಬೂಸವಾರಿಗೆ ದಿನಗಣನೆ ಶುರುವಾಗಿದ್ದು, ಈ ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಗಜರಾಜ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಅಭಿಮನ್ಯು ಬಳಿಕ ಅಂಬಾರಿ ಹೊರುವ ಜವಾಬ್ದಾರಿ ಯಾವ ಆನೆಗೆ ಸಿಗಲಿದೆ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯ ಧನಂಜಯ ಮುಂಚೂಣಿಯಲ್ಲಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಾಲ್ಕು ಗಜರಾಜರ ನಡುವೆ ಪೈಪೋಟಿ
ಈ ಬಾರಿ ಅಂಬಾರಿ ಹೊರುವ ಆನೆ ಆಯ್ಕೆಯಲ್ಲಿ ನಾಲ್ಕು ಗಜರಾಜರ ನಡುವೆ ಪೈಪೋಟಿ ಇದೆ.
ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯನ ಸಾಮರ್ಥ್ಯವನ್ನು ಗಮನಿಸಲಾಗುತ್ತಿದ್ದು, ನಾಲ್ಕು ಆನೆಗಳ ಪೈಕಿ ಧನಂಜಯನತ್ತ ಹೆಚ್ಚಿನ ಒಲವು ವ್ಯಕ್ತವಾಗಿದೆ.
READ THIS : ನಾಡಹಬ್ಬ ಮೈಸೂರು ದಸರಾ 2026 ಕಾರ್ಯಕ್ರಮಗಳ ಪಟ್ಟಿ ಹೀಗಿದೆ ನೋಡಿ

ಯಾರಿಗೆ ಅಂಬಾರಿ ಹೊರುವ ಹೊಣೆ?
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಧನಂಜಯನ ಸಾಮರ್ಥ್ಯ, ಗಾಂಭೀರ್ಯ ಮತ್ತು ತಾಲೀಮಿನ ಮೇಲೆ ಗಮನ ಇರಿಸಲಾಗಿದೆ.
ಅಂತಿಮವಾಗಿ ಯಾರಿಗೆ ಅಂಬಾರಿ ಹೊರುವ ಹೊಣೆ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕೃತ ನಿರ್ಧಾರ ಪ್ರಕಟಿಸಬೇಕಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ಮೈಸೂರಿನ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡಹಬ್ಬದ ಜಂಬೂಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಭಿಮನ್ಯು ನಿವೃತ್ತಿ ಬಳಿಕ ಈಗ ಧನಂಜಯನತ್ತ ಹೆಚ್ಚಿನ ಒಲವು ಇದೆ. ಅಂಬಾರಿ ಹೊರುವ ವಿಷಯದಲ್ಲಿ ಧನಂಜಯ, ಮಹೇಂದ್ರ, ಪ್ರಶಾಂತ, ಏಕಲವ್ಯ ನಡುವೆ ಪೈಪೋಟಿಯಿದ್ದು, ಧನಂಜಯ ಆನೆ ಮುಂಚೂಣಿಯಲ್ಲಿದೆ. ಬಹುತೇಕ ಧನಂಜಯ ಆನೆಯನ್ನೇ ಆಯ್ಕೆ ಮಾಡಬಹುದು ಎಂದು ಹೇಳಿದ್ದಾರೆ.
ಆದ್ರೆ ಧನಂಜಯನೇ ಈ ಬಾರಿ ಚಿನ್ನದ ಅಂಬಾರಿ ಹೊರುತ್ತಾನೆ ಅನ್ನೋ ಅಂತಿಮ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.

MUST WATCH : ಗಣಪತಿ ಮೆರವಣಿಗೆಯಲ್ಲಿ ಹೈಡ್ರಾಮಾ ಪೊಲೀಸ್ರು, ರೇಣುಕಾಚಾರ್ಯ ನಡುವೆ ವಾಗ್ವಾದ




