
Tamil Nadu : ಉಚಿತ ಬಸ್ ಪ್ರಯಾಣದ ವಿರುದ್ಧ ಹೈಕೋರ್ಟ್ಗೆ ಅರ್ಜಿ! ‘ವೆಟ್ರಿ ಪಯಣಂ’ ಯೋಜನೆಗೆ ಬೀಳುತ್ತಾ ಬ್ರೇಕ್?
ಅಕ್ಟೋಬರ್ 2 ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮಹಿಳೆಯರಿಗಾಗಿ ವಿಸ್ತರಿಸಲಾದ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತಂದಿದ್ರು. ಇದನ್ನು ವೆಟ್ರಿ ಪಯಣಂ ಯೋಜನೆ ಎಂದು ಮರುನಾಮಕರಣ ಮಾಡಿದ್ರು. ಇನ್ನು ಈ ಯೋಜನೆಯಡಿ ತಮಿಳುನಾಡಿನ ಮಹಿಳೆಯರು ಕೇವಲ ಸ್ಥಳೀಯ ಬಸ್ಗಳಲ್ಲದೆ, ವಿವಿಧ ಜಿಲ್ಲೆಗಳ ನಡುವೆ ಸಂಚರಿಸುವ ಸರ್ಕಾರಿ ಬಸ್ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು ಆದರೆ ಈ ಯೋಜನೆ ಪ್ರಶ್ನಿಸಿ ಚೆನ್ನೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
84 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಯೋಜನ
ಈ ಯೋಜನೆಯಡಿ ಮಹಿಳೆಯರು ಹಾಗೂ ತೃತೀಯಲಿಂಗಿಗಳು ಎಕ್ಸ್ಪ್ರೆಸ್, ಲಿಮಿಟೆಡ್ ಸ್ಟಾಪ್ ಮತ್ತು ಡೀಲಕ್ಸ್ ಸೇರಿದಂತೆ ಹೆಚ್ಚುವರಿ ಸರ್ಕಾರಿ ಬಸ್ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 12 ಸಾವಿರದ 692 ಸರ್ಕಾರಿ ಬಸ್ಗಳು ಯೋಜನೆಯ ವ್ಯಾಪ್ತಿಗೆ ಬಂದಿದ್ದು, ಪ್ರತಿದಿನ ಸುಮಾರು 84 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ಹೇಳಿದೆ.

ಉಚಿತ ಬಸ್ ಪ್ರಯಾಣದ ವಿರುದ್ಧ ಹೈಕೋರ್ಟ್ಗೆ ಅರ್ಜಿ!
ಆದ್ರೆ ಯೋಜನೆ ಆರಂಭವಾದ ಕೆಲವೇ ದಿನಗಳಲ್ಲಿ ಖಾಸಗಿ ಬಸ್ ಆಪರೇಟರ್ ಕಲಾಮಣಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವುದರಿಂದ ಖಾಸಗಿ ಬಸ್ಗಳ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯಕ್ಕೆ ದೊಡ್ಡ ಹೊಡೆತ ಬೀಳಬಹುದು.
ಇದರಿಂದ ಖಾಸಗಿ ಬಸ್ ಉದ್ಯಮ ನಡೆಸುವುದೇ ಕಷ್ಟವಾಗಬಹುದು ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.
ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಂದ ಪ್ರಯಾಣ ದರ ಪಡೆಯದೇ, ಖಾಸಗಿ ಬಸ್ಗಳಲ್ಲಿ ಮಾತ್ರ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಸಮಾನ ಸ್ಪರ್ಧೆಗೆ ವಿರುದ್ಧವಾಗಿದೆ.
ಇದು ಸಂವಿಧಾನದ 14ನೇ ವಿಧಿಯಡಿ ಇರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದ್ರೆ ಈ ವಾದಗಳ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ನ್ಯಾಯಾಲಯವೇ ಅಂತಿಮವಾಗಿ ನಿರ್ಧರಿಸಬೇಕಿದೆ.
READ THIS : ಟಿವಿಕೆ ಮುಖ್ಯಸ್ಥ, ನಟ ವಿಜಯ್ಗೆ CBI ಸಮನ್ಸ್

ಪ್ರಯಾಣ ವೆಚ್ಚವಾಗಿ ₹6,000 ಕೋಟಿ ಮೊತ್ತವನ್ನು ಸರ್ಕಾರವೇ ಭರಿಸುತ್ತಿದೆ
ಇನ್ನು ‘ವೆಟ್ರಿ ಪಯಣಂ’ ಯೋಜನೆಗಾಗಿ ರಾಜ್ಯ ಸರ್ಕಾರ ವರ್ಷಕ್ಕೆ ಸುಮಾರು 6 ಸಾವಿರ ಕೋಟಿ ರೂಪಾಯಿ ಭರಿಸುತ್ತಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಇದೇ ಮಾದರಿಯಲ್ಲಿ ಖಾಸಗಿ ಬಸ್ಗಳಿಗೂ ಯೋಜನೆ ವಿಸ್ತರಿಸಿ, ಉಚಿತವಾಗಿ ಪ್ರಯಾಣಿಸುವ ಫಲಾನುಭವಿಗಳ ಪ್ರಯಾಣ ದರವನ್ನು ಸರ್ಕಾರವೇ ಭರಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಸಂಘಟನೆ ಈ ಹಿಂದೆಯೇ ಬೇಡಿಕೆ ಇಟ್ಟಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘ವೆಟ್ರಿ ಪಯಣಂ’ ಯೋಜನೆ ಬೀಳುತ್ತಾ ಬ್ರೇಕ್?
ಇದಲ್ಲದೆ, ವಿಧಾನಸಭೆಯಲ್ಲಿ ಸಿಎಂ ವಿಜಯ್ ನೀಡಿದ ಘೋಷಣೆಯನ್ನು ಮಾತ್ರ ಆಧಾರವಾಗಿಸಿಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದಕ್ಕಾಗಿ ಯಾವುದೇ ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿಲ್ಲ ಎಂದೂ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಹೀಗಾಗಿ Tamil Nadu ಸರ್ಕಾರದ ‘ವೆಟ್ರಿ ಪ್ರಯಾಣಂ’ ಯೋಜನೆಯನ್ನು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಘೋಷಿಸಬೇಕು.

ಉಚಿತ ಬಸ್ ಪ್ರಯಾಣ ಯೋಜನೆಗೆ ಮಧ್ಯಂತರ ತಡೆ ಸಿಗುತ್ತಾ..?
ಇನ್ನು ಈ ಅರ್ಜಿ ಇಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಶ್ರತ್ ಅರವಿಂದ್ ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಪಟ್ಟಿಯಾಗಿದೆ.
ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಮಧ್ಯಂತರ ತಡೆ ಸಿಗುತ್ತಾ..? ಅಥವಾ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಾ ಅನ್ನೋದು ನ್ಯಾಯಾಲಯದ ಮುಂದಿನ ಆದೇಶದ ಬಳಿಕ ಸ್ಪಷ್ಟವಾಗಲಿದೆ.
MUST WATCH : ದೇಶ ಕಂಡ ಕೀಳುಮಟ್ಟದ ರಾಜಕಾರಣಿ ರಾಹುಲ್ ರಾಹುಲ್ ಗಾಂಧಿ ವಿರುದ್ಧ ಯತ್ನಾಳ್ ವಾಗ್ದಾಳಿ





