Belagavi | ಜೈಲಲ್ಲಿ ಪೊಲೀಸರಿಂದಲೇ ವೇಶ್ಯಾವಾಟಿಕೆ ದಂಧೆ – ಆರೋಪಿಯಿಂದ ಸ್ಪೋಟಕ ವಿಡಿಯೋ ವೈರಲ್!

Belagavi ಯ ಹಿಂಡಲಗಾ ಜೈಲಿನ ಅಧಿಕಾರಿಗಳ ವಿರುದ್ಧ ಮಾಜಿ ಕೈದಿಯೊಬ್ಬ ಗಂಭೀರ ಆರೋಪಗಳನ್ನು ಮಾಡಿದ್ದು, ಜೈಲಿನೊಳಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾನೆ.
ಜೈಲಿನಲ್ಲಿ ವೇಶ್ಯಾವಾಟಿಕೆ
ತುಮಕೂರಿನ ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಎಂಬ ರೌಡಿಶೀಟರ್, ಜೈಲಿನೊಳಗೆ ಅಧಿಕಾರಿಗಳೇ ವೇಶ್ಯಾವಾಟಿಕೆ, ಮೊಬೈಲ್ ಫೋನ್, ಗಾಂಜಾ ಹಾಗೂ ಮದ್ಯದ ಅಕ್ರಮ ಬಳಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಹಣ ನೀಡಿದರೆ ಕೈದಿಗಳಿಗೆ ಜೈಲಿನೊಳಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಆತ ಹೇಳಿದ್ದಾನೆ.
ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ವಿಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಸುರೇಶ್ ಅಲಿಯಾಸ್ ಸಾಯಿ ಕುಮಾರ್ ಹೇಳಿದ್ದಾನೆ. ಈ ಆರೋಪಗಳು ಇದೀಗ ಹಿಂಡಲಗಾ ಜೈಲಿನ ಭದ್ರತೆ ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
READ THIS : ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್ – 11 ತಿಂಗಳ ಮಗು ಬಿಟ್ಟು ಸೊಸೆ Suicide

ಮಾದಕ ವಸ್ತುಗಳು ಜೈಲಿನೊಳಗೆ ಹೇಗೆ ಲಭ್ಯವಾಗುತ್ತಿವೆ?
ಜೈಲಿನೊಳಗೆ ಗಾಂಜಾ ಹಾಗೂ ಮೊಬೈಲ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ಈ ಹಿಂದೆ ಕೂಡ ಹಲವು ಬಾರಿ ಮಾಧ್ಯಮಗಳ ಮೂಲಕ ಧ್ವನಿ ಎತ್ತಿದ್ದಾಗಿ ಸುರೇಶ್ ಹೇಳಿಕೊಂಡಿದ್ದಾನೆ. ಕೈದಿಗಳು ಜೈಲಿಗೆ ಪ್ರವೇಶಿಸುವ ಸಂದರ್ಭದಲ್ಲಿ ಕಠಿಣ ತಪಾಸಣೆ ನಡೆಯುತ್ತದೆ. ಹೀಗಿದ್ದರೂ ಮೊಬೈಲ್ ಫೋನ್ಗಳು ಹಾಗೂ ಮಾದಕ ವಸ್ತುಗಳು ಜೈಲಿನೊಳಗೆ ಹೇಗೆ ಲಭ್ಯವಾಗುತ್ತಿವೆ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
Belagavi – ಜೈಲು ಅಧಿಕಾರಿಗಳೇ ಈ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು
ಹಣಕ್ಕಾಗಿ ಜೈಲು ಅಧಿಕಾರಿಗಳೇ ಇಂತಹ ಅಕ್ರಮ ವ್ಯವಸ್ಥೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಕೈದಿ ಆರೋಪಿಸಿದ್ದಾನೆ. ಆದರೆ, ಈ ಆರೋಪಗಳ ಸತ್ಯಾಸತ್ಯತೆ ಇನ್ನಷ್ಟೇ ತನಿಖೆಯಿಂದ ಹೊರಬರಬೇಕಿದೆ.

MUST WATCH : ಅತ್ತಿಗೆ ಜೊತೆ ಅನೈತಿಕ ಸಂಬಂಧದ ಶಂಕೆ – ಯುವಕನಿಗೆ ಚಾಕುವಿನಿಂದ ಇರಿತ.!




